ADVERTISEMENT

ರೈಲ್ವೆ ಇಲಾಖೆಯ ಕ್ಷಮೆ ಯಾಚಿಸಿದ ಶಬಾನಾ

ಪಿಟಿಐ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ರೈಲ್ವೆ ಇಲಾಖೆಯ ಕ್ಷಮೆ ಯಾಚಿಸಿದ ಶಬಾನಾ
ರೈಲ್ವೆ ಇಲಾಖೆಯ ಕ್ಷಮೆ ಯಾಚಿಸಿದ ಶಬಾನಾ   

ನವದೆಹಲಿ: ರೈಲ್ವೆ ಸಿಬ್ಬಂದಿಯು ಕೊಳಚೆ ನೀರಿನಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದ ಹಿರಿಯ ನಟಿ ಶಬಾನಾ ಆಜ್ಮಿ ಅವರು ರೈಲ್ವೆ ಇಲಾಖೆಯ ಸ್ಪಷ್ಟನೆ ಬಳಿಕ ಕ್ಷಮೆ ಕೇಳಿದ್ದಾರೆ.

ಕೊಳಚೆ ಗುಂಡಿಯ ನೀರಿನಲ್ಲಿ ತಟ್ಟೆಯನ್ನು ತೊಳೆಯುತ್ತಿರುವ ದೃಶ್ಯ 30 ಸೆಕೆಂಡ್‌ಗಳ ಈ ವಿಡಿಯೊದಲ್ಲಿದೆ. ಇದನ್ನು ನೋಡಿ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಹಾಗೂ ರೈಲ್ವೆ ಸಚಿವಾಲಯಕ್ಕೆ ಅವರು ಟ್ಯಾಗ್ ಮಾಡಿದ್ದರು. ಬುಧವಾರ ಸಂಜೆ ಹೊತ್ತಿಗೆ ಶಬಾನಾ ಅವರಿಗೆ ಇಲಾಖೆಯು ಸ್ಪಷ್ಟೀಕರಣ ನೀಡಿತು.

‘ಮೇಡಂ, ನೀವು ಟ್ಯಾಗ್ ಮಾಡಿರುವ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಮಲೇಷ್ಯಾದ ಉಪಹಾರ ಗೃಹವೊಂದರ ದೃಶ್ಯ ಎಂಬುದು ತಿಳಿಯುತ್ತದೆ’ ಎಂದು ರೈಲ್ವೆ ಇಲಾಖೆ ತಿಳಿಸಿತು. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಆಜ್ಮಿ, ‘ನನ್ನಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ, ಸ್ಪಷ್ಟನೆ ನೀಡಿದ್ದಕ್ಕೆ ಧನ್ಯವಾದ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿ ಇದು ಚರ್ಚೆಗೆ ಗ್ರಾಸವಾಗಿದ್ದು, ನಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ರೈಲ್ವೆ ಇಲಾಖೆಗೆ ಕೆಲ ಟ್ವಿಟರಿಗರು ಸಲಹೆ ನೀಡಿದ್ದಾರೆ. ಇಲಾಖೆಯ ಟ್ವೀಟ್‌ ಅನ್ನು 915 ಜನರ ರೀ ಟ್ವೀಟ್ ಮಾಡಿದ್ದಾರೆ. ಸಾವಿರ ಜನ ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.