ನವದೆಹಲಿ (ಪಿಟಿಐ): ಸುಮಾರು 20 ಚೀನಿ ಯೋಧರು ಕಳೆದ ವಾರ ಗಡಿ ವಾಸ್ತವ ರೇಖೆ (ಎಲ್ಎಸಿ) ಬಳಿ ಭಾರತದ ಭೂಪ್ರದೇಶ ಪ್ರವೇಶಿಸಿ, ಲಡಾಖ್ನ ಚೆಪ್ಜಿ ಎಂಬಲ್ಲಿ ಡೇರೆಗಳನ್ನು ಹಾಕಿದ್ದಾಗಿ ಮೂಲಗಳು ಭಾನುವಾರ ತಿಳಿಸಿವೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಸುಮಾರು 20ರಿಂದ 22 ಯೋಧರು 8ರಿಂದ 10 ಟೆಂಟ್ಗಳನ್ನು ಹಾಕಿದ್ದರು.
ಆದರೆ ಈಗಲೂ ಚೀನಿ ಪಡೆ ಅದೇ ಪ್ರದೇಶದಲ್ಲಿ ಇದೆಯೇ ಅಥವಾ ಟೆಂಟ್ಗಳನ್ನು ತೆರವು ಮಾಡಿದೆಯೇ ಎಂಬುದು ತಿಳಿದಿಲ್ಲ ಎಂದು ಈ ಮೂಲಗಳು ಹೇಳಿವೆ. ಆದರೆ ಇಂತಹ ಯಾವುದೇ ಘಟನೆ ನಡೆದಿರುವುದನ್ನು ಸೇನಾ ಪ್ರಧಾನ ಕಚೇರಿಯು ಅಲ್ಲಗಳೆದಿದೆ. ಈ ಮಧ್ಯೆ, ಭಾರತವು ಶನಿವಾರ ಚೀನಾದೊಂದಿಗೆ ಸೇನಾಧಿಕಾರಿಗಳ ಸಭೆ ನಡೆಸಿದೆ. ಚೆಪ್ಜಿಯು ಚುಮಾರ್ ಪ್ರದೇಶಕ್ಕೆ ಹತ್ತಿರದಲ್ಲಿದ್ದು, ಇಲ್ಲಿ ಕಳೆದ ಒಂದು ವರ್ಷದಲ್ಲಿ ಚೀನಾದಿಂದ ಅನೇಕ ಬಾರಿ ಗಡಿ ಉಲ್ಲಂಘನೆ ನಡೆದಿರುವುದನ್ನು ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.