ನವದೆಹಲಿ (ಪಿಟಿಐ):ಸಂಗೀತ ದಿಗ್ಗಜರಾದ ಲತಾ ಮಂಗೇಶ್ಕರ್ ಮತ್ತು ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರಿಗೆ ನವೆಂಬರ್ 17 ರಂದು ಕೆ. ಎಲ್. ಸೈಗಲ್ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಹಿಂದಿ ಚಲನಚಿತ್ರದ ಮೊದಲ ಮಹಾನ್ ನಟ ಹಾಗೂ ಗಾಯಕ ಕೆ.ಎಲ್. ಸೈಗಲ್ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು `ಉಮ್ರಾಜಾನ್~ ಮತ್ತು `ಕಭಿ ಕಭೀ~ ಚಿತ್ರಗಳ ಸಂಗೀತ ನಿರ್ದೇಶಕರಾದ ಎಂ.ಜೆಡ್. ಖಯ್ಯಾಮ್ ವಿತರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.