ADVERTISEMENT

ಲಿಬಿಯಾ: 557 ಮಂದಿ ಭಾರತಕ್ಕೆ ಆಗಮನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 8:45 IST
Last Updated 1 ಮಾರ್ಚ್ 2011, 8:45 IST

ನವದೆಹಲಿ (ಪಿಟಿಐ): ಸರ್ಕಾರ ವಿರೋಧಿ ಚಳವಳಿಯಿಂದ ನಲುಗುತ್ತಿರುವ ಲಿಬಿಯಾದಿಂದ ಭಾರತೀಯ ಪ್ರಜೆಗಳನ್ನು  ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಸುಕಿನಲ್ಲಿ ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ ಎರಡು ತಂಡಗಳಲ್ಲಿ  ಒಟ್ಟು 577 ಮಂದಿ ಇಲ್ಲಿಗೆ ಬಂದರು. 

ಇದರೊಂದಿಗೆ ವಿಶೇಷ ಏರ್ ಇಂಡಿಯಾ ವಿಮಾನಗಳ ಮೂಲಕ ಒಟ್ಟು 1083 ಭಾರತೀಯ ನಾಗರಿಕರನ್ನು ಇಲ್ಲಿಗೆ ಕರೆತಂದಂತಾಗಿದೆ.

ಮೂರನೇ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ 226 ಭಾರತೀಯ ಪ್ರಜೆಗಳು ನಸುಕಿನಲ್ಲಿ 1.30ಕ್ಕೆ ಇಲ್ಲಿಗೆ ಬಂದರು. ನಾಲ್ಕನೇ ವಿಮಾನ ನಸುಕಿನಲ್ಲಿ 4.30ಕ್ಕೆ ಇಲ್ಲಿಗೆ ಬಂದಿತು. ಅದರಲ್ಲಿ ಒಟ್ಟು 331 ಮಂದಿ ಭಾರತೀಯ ಪ್ರಜೆಗಳಿದ್ದರು. 

ADVERTISEMENT

ಲಿಬಿಯಾದಲ್ಲಿ ಇನ್ನೂ ಉಳಿದಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಇನ್ನೂ ಮೂರು ವಿಶೇಷ ವಿಮಾನಗಳು ಇಂದು ಬೆಳಿಗ್ಗೆ ತ್ರಿಪೋಲಿಗೆ ಪ್ರಯಾಣ ಬೆಳೆಸಿದವು.

 ಲಿಬಿಯಾದಲ್ಲಿ ಒಟ್ಟು 18,000 ಭಾರತೀಯರಿದ್ದು,  ಅವರನ್ನು  ಅಲ್ಲಿಂದ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಬುಧವಾರ ಬೆಳಿಗ್ಗೆಯ ಹೊತ್ತಿಗೆ ಅವರಲ್ಲಿನ ಮೂರರಲ್ಲೊಂದು ಪಾಲಿನಷ್ಟು ಮಂದಿಯನ್ನು ವಿಮಾನ ಮತ್ತು ಹಡಗುಗಳ ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.