ADVERTISEMENT

ಲೋಕಸಭೆಯ ಮೊದಲ ಕಲಾಪ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST

ನವದೆಹಲಿ (ಪಿಟಿಐ): ಲೋಕಸಭೆಯ ಪ್ರಥಮ ಕಲಾಪ ಆರಂಭವಾಗಿದ್ದು 1952ರ ಮೇ 13ರಂದು. ಈ ಕಲಾಪ ಆರಂಭವಾಗಿದ್ದು ಎರಡು ನಿಮಿಷಗಳ ಮೌನಾಚರಣೆ ಮೂಲಕ. ಸ್ಪೀಕರ್ ಆಗಿ ಜಿ.ವಿ. ಮಾವ್ಳಂಕರ್ ಅವರನ್ನು ನೇಮಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು.

60 ವರ್ಷಗಳ ಹಿಂದೆ ಸಂಸತ್ ಕಲಾಪ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡಿತ್ತು ಎಂಬುದನ್ನು ಸಂಸತ್ತಿನ ದಾಖಲೆಗಳು ಹೇಳುತ್ತವೆ.

 ಪೂರ್ವ ಅಲಹಾಬಾದ್ ಮತ್ತು ಪಶ್ಚಿಮ ಜೌನ್‌ಪುರ  ಪ್ರತಿನಿಧಿಸಿದ್ದ ಜವಾಹರಲಾಲ್ ನೆಹರು ಲೋಕಸಭೆಯ ಮೊದಲ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೇ 15ರಂದು ಆಹಾರ ಸಬ್ಸಿಡಿ ವಿಷಯದ ಕುರಿತ ಚರ್ಚೆ ವೇಳೆ ಕಲಾಪವನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.