ADVERTISEMENT

ವಜಾಗೊಂಡ ಐಎಎಫ್ ಮಹಿಳಾ ಅಧಿಕಾರಿ ಅಂಜಲಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST

ಭೋಪಾಲ್(ಪಿಟಿಐ): ಅಶಿಸ್ತು, ಅವಿಧೇಯತೆ, ಸುಳ್ಳು ಆರೋಪ ಹಾಗೂ ಹಣ ದುರುಪಯೋಗ ಆರೋಪಗಳಿಂದ ಕೋರ್ಟ್ ಮಾರ್ಷಲ್‌ಗೆ ಒಳಗಾಗಿ ವಜಾಗೊಂಡಿದ್ದ ಭಾರತೀಯ ವಾಯುದಳದ ಮೊದಲ ಮಹಿಳಾ ಅಧಿಕಾರಿ ಅಂಜಲಿ ಗುಪ್ತ ಸೋಮವಾರ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ರೋಹಿತ್ ನಗರದಲ್ಲಿರುವ ತಮ್ಮ ಸಂಬಂಧಿಯ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜಲಿ, ತಮ್ಮ ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು 2006ರಲ್ಲಿ ಆರೋಪಿಸಿದ್ದರು. ತನಿಖೆಯ ನಂತರ ಅವರು ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ಸಾಬೀತಾಯಿತು. ಅಶಿಸ್ತು, ಅವಿಧೇಯತೆ ಹಾಗೂ ಹಣಕಾಸು ದುರುಪಯೋಗದ ಆರೋಪವೂ ಅವರ ಮೇಲಿತ್ತು. ನಂತರ ಅವರನ್ನು ಕೋರ್ಟ್ ಮಾರ್ಷಲ್ ಶಿಕ್ಷೆಗೆ ಒಳಪಡಿಸಿ, ಸೇವೆಯಿಂದ ವಜಾ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.