ADVERTISEMENT

ವಯೋ ವಿವಾದ: ಡಿ.30ರ ಆದೇಶ ವಾಪಸ್: ಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 8:50 IST
Last Updated 10 ಫೆಬ್ರುವರಿ 2012, 8:50 IST

ನವದೆಹಲಿ (ಪಿಟಿಐ): ತಮ್ಮ ಜನ್ಮ ದಿನಾಂಕವನ್ನು  10 ಮೇ 1950ರ ಬದಲಿಗೆ 10 ಮೇ 1951 ಎಂಬುದಾಗಿ ಪರಿಗಣಿಸುವಂತೆ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಸಲ್ಲಿಸಿದ್ದ ಕಾಯ್ದೆ ಬದ್ಧ ಮನವಿಯನ್ನು ತಿರಸ್ಕರಿಸಿ ನೀಡಲಾಗಿದ್ದ ಡಿಸೆಂಬರ್ 30ರ ಆದೇಶವನ್ನು ತಾನು ಹಿಂತೆಗೆದುಕೊಂಡಿರುವುದಾಗಿ ಕೇಂದ್ರ ಸರ್ಕಾರವು ಶುಕ್ರವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

 ಸರ್ಕಾರದ ಡಿಸೆಂಬರ್ 30ರ ಆದೇಶವು ~ದೋಷಯುಕ್ತ ವಿವೇಚನೆ~ಯಾಗಿದ್ದು ತಾನು ಅದನ್ನು ರದ್ದು ಪಡಿಸಬಹುದು ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯಲು ಕೇಂದ್ರ ನಿರ್ಧರಿಸಿದೆ.

 ಏನಿದ್ದರೂ ವಯೋ ವಿವಾದಕ್ಕೆ ಸಂಬಂಧಿಸಿದಂತೆ ಜನರಲ್ ಸಿಂಗ್ ಅವರ ಮನವಿಯನ್ನು ತಳ್ಳಿಹಾಕಿದ ತನ್ನ ಜುಲೈ 21 ಮತ್ತು ಜುಲೈ 22ರ ಆದೇಶಗಳಿಗೆ ತನ್ನ ಬದ್ಧವಾಗಿರುವುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ ಎಂದು ಅಟಾರ್ನಿ ಜನರಲ್ ಜಿ.ಇ. ವಹನ್ವತಿ ತಿಳಿಸಿದರು.

ತಮ್ಮ ಜನ್ಮ ದಿನಾಂಕ 10 ಮೇ 1951 ಎಂಬುದಾಗಿ ಜನರಲ್ ಸಿಂಗ್ ಪ್ರತಿಪಾದಿಸುತ್ತಿದ್ದರೆ, ರಕ್ಷಣಾ ಸಚಿವಾಲಯವು ಸಿಂಗ್ ಜನ್ಮದಿನಾಂಕವನ್ನು 10 ಮೇ 1950 ಎಂಬುದಾಗಿ ಪರಿಗಣಿಸಲು ಆಗ್ರಹಿಸುತ್ತಿದೆ.

ಕಿಕ್ಕಿರಿದ ಸಭಾಂಗಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ~ಯುಪಿಎಸ್ ಸಿ~ಯಲ್ಲಿ ನಿಮ್ಮ ಜನ್ಮ ದಿನಾಂಕವನ್ನು 10 ಮೇ 1950 ಎಂಬುದಾಗಿ ಏಕೆ ಸರಿಪಡಿಸಲಿಲ್ಲ ಎಂಬಿತ್ಯಾದಿ ಕಠಿಣ ಪ್ರಶ್ನೆಗಳನ್ನು ಸೇನಾ ಮುಖ್ಯಸ್ಥರಿಗೆ ಕೇಳಿದರು.

ಜನರಲ್ ಸಿಂಗ್ ಅವರು ಐಎಂಎ, ಎನ್ ಡಿ ಎ ಸೇರಿದಾಗ ಅವರ ಜನ್ಮದಿನಾಂಕವನ್ನು 10 ಮೇ 1950 ಎಂಬುದಾಗಿಯೇ ನಮೂದಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.