ಢಾಕ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಿರುವ ‘ಲಿಬರೇಶನ್ ಆಪ್ ವಾರ್’ ಪ್ರಶಸ್ತಿಯನ್ನು ವಾಜಪೇಯಿ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವೀಕರಿಸಿದರು.
ಬಾಂಗ್ಲಾ ಸರ್ಕಾರ ವಾಜಪೇಯಿ ಅವರಿಗೆ ಗೌರವಾನ್ವಿತ ‘ಲಿಬರೇಶನ್ ಆಫ್ ವಾರ್’ ಪ್ರಶಸ್ತಿಯನ್ನು ನೀಡಿತ್ತು. ಬಾಂಗ್ಲಾ ದೇಶದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಅವರು ಮೋದಿ ಅವರಿಗೆ ಪ್ರಶಸ್ತಿ ನೀಡಿದರು.
ಈ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಹಿರಿಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಭಾರತೀಯರಿಗೆ ದೊಡ್ಡ ದಿನ. ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಆ ದೊಡ್ಡ ವ್ಯಕ್ತಿಗೆ ಬಾಂಗ್ಲಾ ಸರ್ಕಾರ ದೊಡ್ಡ ಗೌರವ ನೀಡಿದೆ ಎಂದು ಬಾಂಗ್ಲಾ ಸರ್ಕಾರವನ್ನು ಶ್ಲಾಘಿಸಿದರು.
ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಅವರು ಬಾಂಗ್ಲಾ ದೇಶಕ್ಕೆ ನೆರವು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.