ADVERTISEMENT

ವಾಟ್ಸ್‌ಆ್ಯಪ್ ಸೇವೆಯಲ್ಲಿ ವ್ಯತ್ಯಯ

ಪಿಟಿಐ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ವಾಟ್ಸ್‌ಆ್ಯಪ್ ಸೇವೆಯಲ್ಲಿ ವ್ಯತ್ಯಯ
ವಾಟ್ಸ್‌ಆ್ಯಪ್ ಸೇವೆಯಲ್ಲಿ ವ್ಯತ್ಯಯ   

ನವದೆಹಲಿ: ವಾಟ್ಸ್‌ಆ್ಯಪ್ ಸೇವೆಯಲ್ಲಿ ವಿಶ್ವದಾದ್ಯಂತ ಶುಕ್ರವಾರ ಕೆಲಕಾಲ ವ್ಯತ್ಯಯ ಉಂಟಾಗಿತ್ತು.  ವಾಟ್ಸ್‌ಆ್ಯಪ್ ಕೆಲಸಮಾಡುತ್ತಿಲ್ಲ ಎಂದು ಹಲವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಂದೇಶ ಕಳುಹಿಸಲು ಆಗುತ್ತಿಲ್ಲ’, ‘ತಂತ್ರಾಂಶ ತೆರೆದುಕೊಳ್ಳುತ್ತಿಲ್ಲ’, ‘ಕೆಲಸ ಮಾಡುತ್ತಿಲ್ಲ’ ಎಂದು ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

‘ವಾಟ್ಸ್‌ಆ್ಯಪ್ ಅನ್‌ಇನ್‌ಸ್ಟಾಲ್‌ ಮಾಡಿ, ಮತ್ತೆ ಇನ್‌ಸ್ಟಾಲ್‌ ಮಾಡಿಕೊಂಡಿರುವವರಿಗೆ ಎರಡು ನಿಮಿಷದ ಮೌನಾಚರಣೆ’ ಎಂದು ಹೇಳಿರುವ ಟ್ವೀಟ್‌ ಹೆಚ್ಚು ಟ್ರೋಲ್‌ ಆಗಿದೆ.

ADVERTISEMENT

ಭಾರತ, ಅಮೆರಿಕ, ಕೆನಡಾ, ಜರ್ಮನಿ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ವಾಟ್ಸ್‌ಆ್ಯಪ್ ಸ್ಥಗಿತಗೊಂಡಿತ್ತು.

ಬೆಳಿಗ್ಗೆ 10:18ರಿಂದ ವಾಟ್ಸ್‌ಆ್ಯಪ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ದಕ್ಷಿಣ ಆಫ್ರಿಕಾದ 500ಕ್ಕೂ ಹೆಚ್ಚು ಜನ ‘ತಂತ್ರಾಂಶ ಕೆಲಸಮಾಡುತ್ತಿಲ್ಲ’ ಎಂದು ತಿಳಿಸಿರುವುದಾಗಿ ಡೌನ್‌ಡಿಟೆಕ್ಟರ್‌ ಜಾಲತಾಣ ವರದಿ ಮಾಡಿದೆ. 11 ಗಂಟೆ ನಂತರ ಕಾರ್ಯರಂಭ ಮಾಡಿತು ಎಂದು ತಿಳಿಸಿದೆ.

ಭಾರತದಲ್ಲಿ ಮಧ್ಯಾಹ್ನ ಅರ್ಧಗಂಟೆ ಕಾಲ ಯಾವುದೇ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ತಾಂತ್ರಿಕ ದೋಷದಿಂದಾಗಿ ಈ ರೀತಿ ಆಗಿದೆ. ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುವಾಗ ಇಂತಹ ಸಮಸ್ಯೆಗಳು ಎದುರಾಗುವುದು ಸಹಜ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಎರಡು ಬಾರಿ ಇದೇ ರೀತಿಯ ಸಮಸ್ಯೆ ಕಂಡುಬಂದಿತ್ತು. ಇದೇ ಆಗಸ್ಟ್‌ನಲ್ಲಿ ವಿಶ್ವದಾದ್ಯಂತ ಕೆಲವು ಪ್ರದೇಶಗಳಲ್ಲಿ ಸೇವೆಯಲ್ಲಿ ವ್ಯತ್ಯಯ ಆಗಿತ್ತು. ಭಾರತದಲ್ಲಿ 2 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.