ನವದೆಹಲಿ (ಪಿಟಿಐ): ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಾರದು ಮತ್ತು ಹೊರಗಿನವರಿಗೆ ವಾಹನದ ಒಳಗಿರುವವರು ಕಾಣಲಾಗದಂತಹ ಸನ್‌ಫಿಲ್ಮ್‌ಗಳನ್ನು ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಭದ್ರತೆಯ ಕಾರಣಕ್ಕಾಗಿ ಗಣ್ಯ ವ್ಯಕ್ತಿಗಳು ಸರ್ಕಾರಿ ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಹುದಾಗಿದೆ ಎಂದು ಸ್ಪಷ್ಟಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ನ್ಯಾಯಪೀಠವು, ಈ ಬಗ್ಗೆ ರಾಜ್ಯ ಸರ್ಕಾರಗಳು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.
1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳ ಮುಂದಿನ ಮತ್ತು ಹಿಂದಿನ ಗಾಜುಗಳಿಗೆ ಶೇಕಡಾ 70ರಷ್ಟು ಗೋಚರ ಸ್ಪಷ್ಟತೆ ಇರುವ ಹಾಗೂ ಪಕ್ಕದ ಕಿಟಕಿ ಗಾಜುಗಳಿಗೆ ಶೇಕಡಾ 50ರಷ್ಟು ಗೋಚರ ಸ್ಪಷ್ಟತೆ ಇರುವ ಸನ್‌ಫಿಲ್ಮ್‌ನ್ನು ಅಂಟಿಸಬೇಕು.
ದಟ್ಟ ಬಣ್ಣದ ಸನ್ ಫಿಲ್ಮ್‌ಗಳು ಇರುವ ಕಾರು ಮತ್ತು ಇತರ ವಾಹನಗಳಲ್ಲಿ ಅಪರಾಧಗಳನ್ನು ಎಸಗುತ್ತಿರುವುದರಿಂದ ಸನ್‌ಫಿಲ್ಮ್ ಅಂಟಿಸುವುದನ್ನು ನಿಷೇಧಿಸಬೇಕು ಎಂದು ಅವಿಶೇಕ್ ಅವರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.