ADVERTISEMENT

ವಿಚ್ಛೇದಿತ ಮಹಿಳೆಗೆ ಆಸ್ತಿಯಲ್ಲಿ ಪಾಲು

​ಪ್ರಜಾವಾಣಿ ವಾರ್ತೆ
Published 17 ಮೇ 2012, 20:10 IST
Last Updated 17 ಮೇ 2012, 20:10 IST

ನವದೆಹಲಿ (ಪಿಟಿಐ): ವಿಚ್ಛೇದಿತ ಮಹಿಳೆಗೆ ಪತಿಯ ಸ್ಥಿರಾಸ್ತಿಯಲ್ಲಿ ಕಡ್ಡಾಯವಾಗಿ ಪಾಲು ನೀಡುವ ದಿಸೆಯಲ್ಲಿ ವಿವಾಹ ಕಾಯ್ದೆ ಮಸೂದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರವೂ ದಂಪತಿ ರಾಜಿಯಾಗಲು ನೀಡಲಾಗುತ್ತಿದ್ದ ಆರು ತಿಂಗಳ ಕಡ್ಡಾಯ ಕಾಲಾವಕಾಶ ನಿಯಮವನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
 
ಒಂದು ವೇಳೆ ಈ ಕಾಲಾವಕಾಶ ಕಡಿತಗೊಳಿಸಲು ಬಯಸುವ ದಂಪತಿ ಒಟ್ಟಿಗೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಿರುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.