
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಪ್ರತಿಭಟನೆ, ಮುಷ್ಕರ ಮುಂತಾದ ಕಾರಣಗಳಿಂದ ಉತ್ಪಾದನೆ ಆರಂಭ ವಿಳಂಬವಾಗಿದ್ದ ಕೂಡುಂಕುಳಂನ ದೇಶದ ಅತಿ ದೊಡ್ಡ ಅಣು ವಿದ್ಯುತ್ ಸ್ಥಾವರವು ವಿದ್ಯುತ್ ಉತ್ಪಾದನೆಗೆ ಸಜ್ಜಾಗಿದೆ.
ನಿಯಮಗಳ ಅಳವಡಿಕೆಯ ಅಂತಿಮ ತಪಾಸಣೆ ನಡೆಯುತ್ತಿದ್ದು ಉತ್ಪಾದನೆ ಆರಂಭಿಸಲು ಸಂಪೂರ್ಣ ಸಜ್ಜಾಗಿದೆ ಎಂದು ಭಾರತೀಯ ಅಣು ವಿದ್ಯುತ್ ನಿಗಮದ ನೂತನ ಅಧ್ಯಕ್ಷ ಕೈಲಾಸ್‌ಚಂದ್ರ ಪುರೋಹಿತ್ ತಿಳಿಸಿದ್ದಾರೆ.
ಮೂರು ಹಂತದ ಪರಿಶೀಲನಾ ಕಾರ್ಯ ಮುಗಿದ ಮೇಲೆ ಅಣು ನಿಯಂತ್ರಣ ಮಂಡಲಿ ವಿದ್ಯುತ್ ಉತ್ಪಾದನೆಗೆ ಅಧಿಕೃತ ಅನುಮತಿ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.