ADVERTISEMENT

ವಿಮಾನ ಇಳಿಸಿದರೂ ಬದುಕದ ಕಂದಮ್ಮ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ಮುಂಬೈ (ಪಿಟಿಐ): ಏಳು ತಿಂಗಳ ಮಗು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ 150 ಪ್ರಯಾಣಿಕರಿದ್ದ ಇಂಡಿಗೊ ವಿಮಾನ ಇಲ್ಲಿನ ನಿಲ್ದಾಣದಲ್ಲಿ ಭಾನುವಾರ ತುರ್ತು ಭೂಸ್ಪರ್ಶ ಮಾಡಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮೃತಪಟ್ಟಿದೆ ಎಂದು ನಿಲ್ದಾಣದಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಿದ ಬಳಿಕ ವೈದ್ಯರು ಘೋಷಿಸಿದರು.

ಹೃದಯದಲ್ಲಿ ಏಳು ರಂಧ್ರಗಳಿದ್ದ ಕಾರಣ ಮಗುವಿನ ಶಸ್ತ್ರಚಿಕಿತ್ಸೆಗೆ ವಿಮಾನದಲ್ಲಿ ಚೆನ್ನೈಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ಇಂಡಿಗೊ ಏರ್‌ಲೈನ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.