ADVERTISEMENT

ವಿಮಾನ ಪ್ರಯಾಣ ಜೇಬಿಗೆ ಭಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST


ನವದೆಹಲಿ (ಪಿಟಿಐ): ದೇಶೀಯ ಹಾಗೂ ವಿದೇಶಿ ವಿಮಾನ ಪ್ರಯಾಣಗಳ ಸೇವಾ ತೆರಿಗೆಯನ್ನು ಬಜೆಟ್‌ನಲ್ಲಿ ಹೆಚ್ಚಿಸಲಾಗಿದ್ದು, ಏ.1ರಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ.

ಸಾಮಾನ್ಯ ದರ್ಜೆಯ  ಸೇವಾ ತೆರಿಗೆಯನ್ನು ರೂ 100ರಿಂದ ರೂ 150ಕ್ಕೆ, ಹಾಗೆಯೇ, ವಿದೇಶಿ ಪ್ರಯಾಣದ  ಸೇವಾ ತೆರಿಗೆಯನ್ನು ರೂ 500ರಿಂದ ರೂ 750ಕ್ಕೆ ಹೆಚ್ಚು ಮಾಡಲಾಗಿದೆ.

ಇನ್ನು ಉನ್ನತ ದರ್ಜೆಯ (ಬಿಜಿನೆಸ್ ಕ್ಲಾಸ್) ಪ್ರಯಾಣಕ್ಕೆ ವಿಮಾನ ಟಿಕೆಟ್ ದರದ ಶೇ 10ರಷ್ಟನ್ನು ಸೇವಾ ತೆರಿಗೆಯಾಗಿ ನಿಗದಿ ಮಾಡಲಾಗಿದೆ.
ಇದರಿಂದಾಗಿ ಉನ್ನತ ದರ್ಜೆಯಲ್ಲಿನ ವಿಮಾನ ಪ್ರಯಾಣಿಗರು ದೇಶೀಯ ಹಾಗೂ ವಿದೇಶಿ ಪ್ರಯಾಣಕ್ಕೆ ನೀಡಲಿರುವ ಸೇವಾ ತೆರಿಗೆ ವ್ಯತ್ಯಾಸ ರಹಿತವಾಗಲಿದೆ.

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಬಂಡವಾಳ ಹೂಡಿಕೆ  ರೂಪದಲ್ಲಿ ಪ್ರಸಕ್ತ ಸಾಲಿಗೆ 1200 ಕೋಟಿ ರೂಪಾಯಿಯನ್ನು ಪ್ರಣವ್ ನೀಡಿದ್ದಾರೆ. ಈ ಮುನ್ನ 2009-10ರಲ್ಲಿ ಈ ಸಂಸ್ಥೆಗೆ ರೂ 800 ಕೋಟಿ ಹಾಗೂ 2010-11ರಲ್ಲಿ 1200 ಕೋಟಿ ರೂಪಾಯಿ ನೀಡಲಾಗಿತ್ತು.

ಒಟ್ಟಾರೆ, ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಯೋಜನೆ ಹಾಗೂ ಯೋಜನೇತರ ವೆಚ್ಚಕ್ಕಾಗಿ 2,393.88 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.