ADVERTISEMENT

ವಿಶ್ವ ಈಜು ಸ್ಪರ್ಧೆಗೆ ಬೆಳಗಾವಿಯ ಶ್ರೀಧರ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ವಿಶ್ವ ಈಜು ಸ್ಪರ್ಧೆಗೆ ಬೆಳಗಾವಿಯ ಶ್ರೀಧರ್‌
ವಿಶ್ವ ಈಜು ಸ್ಪರ್ಧೆಗೆ ಬೆಳಗಾವಿಯ ಶ್ರೀಧರ್‌   

ಬೆಳಗಾವಿ: ನಗರದ ಅಂಗವಿಕಲ ಈಜುಪಟು ಶ್ರೀಧರ ಮಾಳಗಿ ಜೂನ್‌ 7ರಿಂದ 10ರವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಈಜು ಆಹ್ವಾನಿತ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇಲ್ಲಿನ ಬೆಳಗಾವಿ ಈಜುಪಟುಗಳ ಕ್ಲಬ್‌ ಸದಸ್ಯರಾಗಿರುವ ಅವರು, 100 ಮೀ. ಫ್ರೀ ಸ್ಟೈಲ್‌, 100 ಮೀ. ಬಟರ್‌ಫ್ಲೈ, 100 ಮೀ. ಬ್ಯಾಕ್‌ ಸ್ಟ್ರೋಕ್‌, 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಹಾಗೂ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 21 ಮಂದಿಯ ಭಾರತ ತಂಡ ಜರ್ಮನಿ ತಲುಪಿದೆ. ಈ ಹಿಂದಿನ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪ‍ಡೆದಿದ್ದರು. ಉಮೇಶ ಕಲಘಟಗಿ, ಪ್ರಸಾದ್ ತೆಂಡುಲ್ಕರ್‌ ಹಾಗೂ ಅಕ್ಷಯ್‌ ಶೆರಿಗಾರ ಅವರಿಂದ ತರಬೇತಿ ಪಡೆಯುತ್ತಿದ್ದು, 2020ಕ್ಕೆ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT