ಬೆಂಗಳೂರು: ಪೆಟ್ರೋಲ್ ಬಂಕ್‌ಗಳಲ್ಲಿ ಡೆಬಿಟ್ ಕಾರ್ಡ್ ಇಲ್ಲವೇ ಕ್ರೆಡಿಟ್ ಕಾರ್ಡ್ ಬಳಸುವ ಪ್ರತಿ ವಹಿವಾಟಿನ ಮೇಲೆ ಶೇಕಡ 1ರಷ್ಟು ವಹಿವಾಟು ನಿರ್ವಹಣಾ ಶುಲ್ಕ (Transaction Fee) ವಿಧಿಸಲು ಬ್ಯಾಂಕ್‌ಗಳು ಮುಂದಾಗಿರುವುದನ್ನು ವಿರೋಧಿಸಿ ಸೋಮವಾರದಿಂದ ಕಾರ್ಡ್‌ಗಳನ್ನು ಸ್ವೀಕರಿಸದಿರಲು ಪೆಟ್ರೋಲ್ ಮಾರಾಟಗಾರರು ನಿರ್ಧರಿಸಿದ್ದಾರೆ.
ಇದರಿಂದಾಗಿ ಸೋಮವಾರದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಕಾರ್ಡ್ ಸ್ವೈಪ್ ಇರುವುದಿಲ್ಲ. ಬದಲಿಗೆ ಪೂರ್ಣ ನಗದು ವ್ಯವಹಾರ ನಡೆಸುವುದಾಗಿ ಪೆಟ್ರೋಲ್ ಮಾರಾಟಗಾರರು ತಿಳಿಸಿದ್ದಾರೆ.
‘ಪ್ರತಿ ವಹಿವಾಟಿನ ಮೇಲೆ ಶೇಕಡ 1ರಷ್ಟು ಶುಲ್ಕ ವಿಧಿಸಿದರೆ ವ್ಯವಹಾರ ಮಾಡುವುದು ಕಷ್ಟವಾಗುತ್ತದೆ. ಈ ಬಗ್ಗೆ ಕೂಡಲೇ ಬ್ಯಾಂಕ್‌ಗಳು ಸಾರ್ವಜನಿಕರ ಕ್ಷಮೆ ಯಾಚಿಸಿ, ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಅಖಿಲ ಕರ್ನಾಟಕ ಪೆಟ್ರೋಲ್ ವಿತರಕರ ಒಕ್ಕೂಟದ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.