ADVERTISEMENT

ಶ್ರೀಲಂಕಾ ಮೀನುಗಾರರು, ನೌಕಾ ಸಿಬ್ಬಂದಿ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ರಾಮೇಶ್ವರ (ಪಿಟಿಐ): ಭಾರತದ ಮಿನು­ಗಾರರ ಬಲೆಗಳನ್ನು ದೋಚಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡು ಪೊಲೀಸರು ಶ್ರೀಲಂಕಾ ಮೀನುಗಾರರ ವಿರುದ್ಧ ಮೊಕ­ದ್ದಮೆ ದಾಖಲಿಸಿದ್ದಾರೆ.

ಪಾಕ್‌ ಜಲಸಂಧಿಯ ನೆಡುಂತೀವು ಪ್ರದೇಶದಲ್ಲಿ ಮಿನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಸುಮಾರು ₨2.80 ಲಕ್ಷ ಮೌಲ್ಯದ ಬಲೆಗಳನ್ನು ಲಂಕಾ ಮೀನು­ಗಾರರು ದೋಚಿದ್ದಾರೆ ಎಂದು ಜಾನ್‌ ಬ್ರಿಟ್ಟೊ ನೀಡಿದ ದೂರಿನ ಆಧಾರ­­ದಲ್ಲಿ ಪೆಂಬನ್‌ ಪೊಲೀಸರು ಪ್ರಕರಣ ದಾಖಲಿಸಿ­ಕೊಂಡಿದ್ದಾರೆ.

ನೌಕಾ ಸಿಬ್ಬಂದಿ ಮೇಲೂ ಮೊಕದ್ದಮೆ: ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ವಿರು­ದ್ಧವೂ ಮೊಕದ್ದಮೆ ದಾಖಲಿಸಲಾಗಿದೆ. ಭಾರತದ ಮಿನುಗಾರರ ದೋಣಿಗೆ ಶ್ರೀಲಂಕಾ ನೌಕಾ ಸಿಬ್ಬಂದಿ ತಮ್ಮ ಹಡ­ಗನ್ನು ಡಿಕ್ಕಿ ಮಾಡಿಸಿ ಜಖಂಗೊಳಿಸಿದ್ದಾರೆ ಎಂದು ಸಹಾಯರಾಜ್‌ ದೂರು ನೀಡಿ­ದ್ದಾರೆ. ರಾಮೇಶ್ವರ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಗಾಳಿಯಲ್ಲಿ ಗುಂಡು ಹಾರಿಸಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದೂ ಅವರು ದೂರಿನಲ್ಲಿ ದಾಖಲಿಸಿದ್ದಾರೆ.

ಭಾರತದ ಗಡಿಯೊಳಗೆ ಶ್ರೀಲಂಕಾ ನೌಕಾ ಸಿಬ್ಬಂದಿ ಪ್ರವೇಶಿಸಿದರೆ ತಕ್ಷಣ ಬಂಧಿಸಬೇಕು ಹಾಗೂ ಅವರನ್ನು ವಿಚಾ­ರಣೆಗೆ ಒಳಪಡಿಸಬೇಕೆಂದು ಅಧಿಕಾರಿ­ಗಳು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.