ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ವಿಮಾನ ನಿಲ್ದಾಣದಲ್ಲಿ ಸೌರ ವಿದ್ಯುತ್
ನವದೆಹಲಿ (ಪಿಟಿಐ):
ದೇಶದಲ್ಲಿ ಇದೇ ಮೊದಲ ಬಾರಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌರ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಕೋಲ್ಕತ್ತ ಮೂಲದ ವಿಕ್ರಂ ಸೋಲಾರ್ ಕಂಪೆನಿಯು ಇಲ್ಲಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲಿದೆ.

ಅಗ್ಗದ ಬೆಲೆಗೆ ಸೌರ ವಿದ್ಯುತ್
ನವದೆಹಲಿ (ಪಿಟಿಐ):
ದೇಶದಲ್ಲಿ ಮಲೇಷ್ಯಾ, ಚೀನಾ, ತೈಪೈ ಹಾಗೂ ಅಮೆರಿಕದ ಸೌರ ವಿದ್ಯುತ್ಕೋಶಗಳು ಅಗ್ಗದ ಬೆಲೆಗೆ ಮಾರಾಟವಾಗುತ್ತಿವೆ ಎಂಬ ಆರೋಪ ಕುರಿತು ಸರ್ಕಾರ ತನಿಖೆ ಆರಂಭಿಸಿದೆ. ಈ ಸಂಬಂಧ ಇಂಡೊ ಸೋಲಾರ್ ಲಿಮಿಟೆಡ್, ಜುಪೀಟರ್ ಸೋಲಾರ್ ಪವರ್ ಹಾಗೂ ವೆಬ್‌ಸೋಲ್ ಎನರ್ಜಿ ಸಿಸ್ಟಮ್ಸ ಲಿಮಿಟೆಡ್ ದೂರು ಸಲ್ಲಿಸಿದ್ದವು.

ಕಾರ್ಗಿಲ್‌ನಿಂದ ಕೊರಿಯರ್ ಸೇವೆ
ಶ್ರೀನಗರ (ಪಿಟಿಐ):
ಭಾರಿ ಹಿಮಪಾತದಿಂದಾಗಿ ಶ್ರೀನಗರ ಮತ್ತು ಕಾರ್ಗಿಲ್ ನಡುವಿನ ಮಾರ್ಗವು ಮುಚ್ಚಿ ಹೋಗಿರುವ ಪರಿಣಾಮ ಜಮ್ಮು- ಕಾಶ್ಮೀರ ಸರ್ಕಾರವು ಡಿ. 5ರಿಂದ ವಿಮಾನದ ಮೂಲಕ ಕಾರ್ಗಿಲ್‌ನಿಂದ ಜಮ್ಮು ಮತ್ತು ಶ್ರೀನಗರಕ್ಕೆ ಕೊರಿಯರ್ ಸೇವೆಯನ್ನು ಪ್ರಾರಂಭಿಸಲಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಮಾಲ್ಡೀವ್ಸ್ ಸಂಬಂಧ: ಪರಿಶೀಲನೆ

ನವದೆಹಲಿ (ಪಿಟಿಐ): ಮಾಲ್ಡೀವ್ಸ್ ವಿಮಾನ ನಿಲ್ದಾಣ ನವೀಕರಣಕ್ಕೆ ಸಂಬಂಧಿಸಿದ ಜಿಎಂಆರ್ ಗುತ್ತಿಗೆ ರದ್ದುಗೊಂಡ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನೊಂದಿಗಿನ ಒಟ್ಟಾರೆ ಸಂಬಂಧದ ಕುರಿತು ಭಾರತ ಉನ್ನತ ಮಟ್ಟದ ಪರಿಶೀಲನೆ ನಡೆಸಿತು. ಒಂದು ವೇಳೆ ಭಾರತ ವಿರೋಧಿ ಭಾವನೆ ಕಂಡುಬಂದಲ್ಲಿ ಭಾರತದ ಹಿತಾಸಕ್ತಿಯ ಮೇಲೆ ಉಂಟಾಗುವ ನೇರ ಪರಿಣಾಮದ ವಿವಿಧ ಆಯಾಮಗಳ ಕುರಿತೂ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಭದ್ರತೆ ಮೇಲಿನ ಸಮಿತಿ ನಡೆಸಿದ ಸಭೆಯಲ್ಲಿ ಚರ್ಚಿಸಲಾಯಿತು.

ಭಾರತ-ಪಾಕ್ ಗಡಿಯಲ್ಲಿ ತಂತಿ ಬೇಲಿ
ನವದೆಹಲಿ (ಪಿಟಿಐ):
ಭಾರತ-ಪಾಕಿಸ್ತಾನ ನಡುವಿನ ವಿವಾದಿತ ಸರ್ ಕ್ರೀಕ್ ಗಡಿರೇಖೆಯಲ್ಲಿ ಸುಮಾರು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರ ಲೋಹದ ತಂತಿಬೇಲಿಯನ್ನು ನಿರ್ಮಿಸಲು ಭಾರತ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.