ADVERTISEMENT

ಸಣ್ಣ ಅಲ್ಟ್ರಾಸೊನೊಗ್ರಫಿ ಯಂತ್ರಗಳ ನಿಷೇಧ?

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ನವದೆಹಲಿ: ದೇಶ ಮಂಗಳವಾರ ಹೆಣ್ಣು ಶಿಶುವಿನ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಲಿಂಗ ಪತ್ತೆ ಹಚ್ಚುವುದಕ್ಕೆ ಬಳಕೆಯಾಗುತ್ತಿರುವ ಸಣ್ಣ ಪ್ರಮಾಣದ ಅಲ್ಟ್ರಾಸೊನೊಗ್ರಫಿ ಯಂತ್ರಗಳ ಬಳಕೆಯನ್ನು ನಿಷೇಧಿಸುವ ಹಾಗೂ ಅಲ್ಟ್ರಾಸೌಂಡ್ ಯಂತ್ರ, ಜೆನೆಟಿಕ್ ಸಲಹಾ ಕೇಂದ್ರಗಳ ನೋಂದಣಿ ಶುಲ್ಕವನ್ನು ಅಧಿಕಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧತೆ ನಡೆಸಿದೆ.

ದೇಶದಾದ್ಯಂತ ಅಲ್ಟ್ರಾಸೌಂಡ್ ತಂತ್ರಜ್ಞಾನದ ದುರ್ಬಳಕೆ ಮಾಡಿ ಲಿಂಗ ಆಯ್ಕೆ ಮಾಡುವುದನ್ನು ಇದು ಕೊನೆಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.