ADVERTISEMENT

ಸತ್ಯನಾರಾಯಣ ‘ಅಕಾಡೆಮಿ ರತ್ನ’

ಮೈವಿಸುಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2013, 19:30 IST
Last Updated 23 ನವೆಂಬರ್ 2013, 19:30 IST

ನವದೆಹಲಿ: ಮೈಸೂರಿನ ರಾ.ಸತ್ಯ ನಾರಾಯಣ ಸೇರಿದಂತೆ  ಪ್ರದರ್ಶಕ ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮೂವರು ಗಣ್ಯರು 2013ನೇ ಸಾಲಿನ  ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ  ಪ್ರತಿಷ್ಠಿತ ‘ಅಕಾಡೆಮಿ ರತ್ನ’ (ಫೆಲೊ) ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇದೇ ಕ್ಷೇತ್ರದಲ್ಲಿ ಸಮಗ್ರ ಕೊಡುಗೆ ಗಾಗಿ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ (ಪ್ರದರ್ಶಕ ಕಲೆ) ಹಾಗೂ ಎನ್‌.ರಾಮನಾಥನ್‌ ಅವರಿಗೆ ಅಕಾ­ಡೆಮಿ ಪುರಸ್ಕಾರ ನೀಡಲಾಗಿದೆ.

ಇವರ ಜೊತೆಗೆ, ಸಂಗೀತದ ವಿವಿಧ ಕ್ಷೇತ್ರಗಳ 38 ಸಾಧಕರನ್ನು (ಎರಡು ಜಂಟಿ ಪ್ರಶಸ್ತಿ) ಅಕಾಡೆಮಿ ಪ್ರಶಸ್ತಿಗೆ ಹೆಸರಿಸಲಾಗಿದೆ.
ಸತ್ಯನಾರಾಯಣ ಹೊರತಾಗಿ  ಕನಕ ರೆಲೆ, ಮಹೇಶ್‌ ಎಲ್ಕುಂಚ್ವಾರ್‌ ಅವರು ‘ಅಕಾಡೆಮಿ ರತ್ನ’ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಅಕಾಡೆಮಿ ರತ್ನ’ ಪುರಸ್ಕೃತರಿಗೆ ₨3 ಲಕ್ಷ ನಗದು, ತಾಮ್ರಪತ್ರ, ಶಾಲು ನೀಡಾಗುವುದು. ಅಕಾಡೆಮಿ ಪ್ರಶಸ್ತಿಯು ರೂ.1 ಲಕ್ಷ ನಗದು, ತಾಮ್ರಪತ್ರ ಮತ್ತು ಶಾಲನ್ನು ಒಳಗೊಂಡಿದೆ.

ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಮುಖರು
ವೀಣಾ ಸಹಸ್ರಬುದ್ಧೆ (ಹಿಂದೂಸ್ತಾನಿ ಗಾಯನ) ಹಶ್ಮತ್‌ ಅಲಿ ಖಾನ್‌ (ತಬಲ),  ಧ್ರುವ ಘೋಷ್‌ (ಸಾರಂಗಿ), ಅರುಣಾ ಸಾಯಿರಾಂ, ಹೈದರಾಬಾದ್‌ ಸಹೋದರ­ರಾದ ಡಿ.ಶೇಷಾ­ಚಾರಿ ಮತ್ತು ಡಿ.ರಾಘವಾಚಾರಿ  (ಕರ್ನಾಟಕ ಸಂಗೀತ ಗಾಯನ), ತಿರುಚ್ಚಿ ಶಂಕರನ್‌ (ಮೃದಂಗ), ತಿರುವಿಲ್‌ ಜಯಶಂಕರ್‌ (ನಾದಸ್ವರ),  ರಂಗಭೂಮಿ ಕ್ಷೇತ್ರದ  ಪುಂಡಲೀಕ ನಾರಾಯಣ್‌ ನಾಯ್ಕ್‌ (ನಾಟಕ ರಚನೆ) ಕಮಲಾಕರ ಮುರಳೀಧರ ಸೊಂಟಕ್ಕೆ (ನಿರ್ದೇಶನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT