ನವದೆಹಲಿ (ಪಿಟಿಐ): ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ರೇವಾರಿ ಹಾಗೂ ಪಲನ್‌ಪುರ ಮಧ್ಯೆರೂ 6,700 ಕೋಟಿ ರೂಪಾಯಿ ವೆಚ್ಚದಲ್ಲಿ 640 ಕಿಲೋ ಮೀಟರ್ ಉದ್ದದ ದ್ವಿಪಥ ಮಾರ್ಗ ಸ್ಥಾಪನೆಗೆ ರೈಲ್ವೆಯು ಜಪಾನ್ ಜತೆ ದೀರ್ಘಕಾಲೀನ ಒಪ್ಪಂದ ಮಾಡಿಕೊಂಡಿದೆ.
ದೇಶದ ಅತಿ ದೊಡ್ಡ ಮೊತ್ತದ ಒಪ್ಪಂದ ಎಂದೇ ಪರಿಗಣಿಸಲಾದ ಈ ಕಾಮಗಾರಿಯನ್ನು ಅಂತರರಾಷ್ಟ್ರೀಯ ಮಟ್ಟದ ಹರಾಜಿನಲ್ಲಿ ಎಲ್‌ಅಂಡ್‌ಟಿ-ಸೊಜಿತ್ಜ್ ಕಂಪೆನಿಯು ತನ್ನದಾಗಿಸಿಕೊಂಡಿದೆ. ಸೊಜಿತ್ಜ್ ಜಪಾನ್ ಮೂಲದ ಕಂಪೆನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.