
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಹೆಚ್ಚಿನ ಸರಕು ಸಾಗಣೆಯಿಂದ ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆಗೆ ಶೇಕಡಾ 30ರಷ್ಟು ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ.
ರೈಲ್ವೆ ಸಚಿವರು ಈ ಸಲ ಬಜೆಟ್‌ನಲ್ಲಿ ಸರಕು ಸಾಗಣೆಯ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ 1,025 ದಶಲಕ್ಷ ಟನ್ ಸರಕು ಸಾಗಿಸಿ 89,339 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ಕರ್ನಾಟಕ ಮತ್ತು ಒಡಿಶಾದಲ್ಲಿ ಕಬ್ಬಿಣ ಅದಿರು ರಫ್ತಿನ ಮೇಲೆ ನಿಷೇಧ ಹೇರಿರುವುದರಿಂದ ಈ ಬಾಬ್ತಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಸಾಗಣೆಯಾಗದೆ ಆದಾಯದಲ್ಲಿ ಕಡಿತ ಉಂಟಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.