ADVERTISEMENT

ಸರ್ಕಾರದಿಂದ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ತಮ್ಮ ಸರ್ಕಾರ ತನ್ನದೇ ವೃತ್ತಪತ್ರಿಕೆ ಹಾಗೂ ಟಿ.ವಿ ವಾಹಿನಿಯನ್ನು ಹೊಂದಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಘೋಷಿಸಿದ್ದಾರೆ.

 `ದೈನಿಕ್ ಪಶ್ಚಿಮ್‌ಬಂಗ~ ಎಂಬ ಹೆಸರಿನ ಪತ್ರಿಕೆ ಆರಂಭವಾಗಲಿದ್ದು, ಟಿ.ವಿ ವಾಹಿನಿಗೂ `ಪಶ್ಚಿಮ್ ಬಂಗ~ ಎಂಬ ಹೆಸರನ್ನೇ ಇಡಲಾಗುತ್ತಿದೆ. `ಸರ್ಕಾರದ ಬಗ್ಗೆ ನಕಾರಾತ್ಮಕ ಸುದ್ದಿಗಳನ್ನೇ ಪ್ರಸಾರ ಮಾಡುವ ಮಾಧ್ಯಮಗಳು, ಒಳ್ಳೆಯ ಕೆಲಸಕ್ಕೆ ಹೆಚ್ಚು ಪ್ರಚಾರ ನೀಡುವುದಿಲ್ಲ. ಹೀಗಾಗಿ ಇಂತಹ ಕ್ರಮಕ್ಕೆ ಮುಂದಾಗಲಾಗಿದೆ~ ಎಂದು ಮಮತಾ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.