ADVERTISEMENT

ಸರ್ಕಾರ, ಸೇನೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಶಿಮ್ಲಾ (ಪಿಟಿಐ): ಕ್ರೀಡಾಂಗಣ ನಿರ್ಮಾಣಕ್ಕೆ ಅನ್ನನ್‌ದೇಲ್ ಮೈದಾನವನ್ನು ಹಸ್ತಾಂತರಿಸಬೇಕೆನ್ನುವ ಬೇಡಿಕೆ ಕುರಿತಂತೆ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಸೇನೆ ನಡುವೆ ಜಟಾಪಟಿ ನಡೆದಿದ್ದು, `ಆಟಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಕಡೆಗಣಿಸಲಾಗದು~ ಎಂದು ಸೇನೆ ಭಾನುವಾರ ಹೇಳಿದೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, `ಈ ಪ್ರದೇಶವನ್ನು ಸೇನೆಯು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ~ ಎಂದು ದೂರಿದ್ದಾರೆ.

ಎರಡನೇ ಮಹಾಯುದ್ಧದ ಕಾಲದಿಂದಲೂ ಈ ಪ್ರದೇಶವು ಸೇನೆಯ ಹಿಡಿತದಲ್ಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.