ADVERTISEMENT

ಸಾಮಾಜಿಕ ಹೊಣೆಗಾರಿಕೆ ತೋರದ ಉದ್ದಿಮೆಗಳು

ಕಾರ್ಪೊರೇಟ್‌ ಸಂಸ್ಥೆಗಳ ಸ್ಪಂದನೆ ನೀರಸ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:38 IST
Last Updated 8 ಜೂನ್ 2017, 19:38 IST
ಸಾಮಾಜಿಕ ಹೊಣೆಗಾರಿಕೆ ತೋರದ ಉದ್ದಿಮೆಗಳು
ಸಾಮಾಜಿಕ ಹೊಣೆಗಾರಿಕೆ ತೋರದ ಉದ್ದಿಮೆಗಳು   

ನವದೆಹಲಿ: ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವಂತೆ ಕೇಂದ್ರ ಸರ್ಕಾರ ನೀಡಿದ್ದ ಕರೆಗೆ ಭಾರತೀಯ ಉದ್ದಿಮೆಗಳು ನೀರಸವಾಗಿ ಸ್ಪಂದಿಸಿವೆ.
ಸರ್ಕಾರಿ ಶಾಲೆಗಳಲ್ಲಿ ನಿರ್ಮಾಣವಾದ ಒಟ್ಟು ಶೌಚಾಲಯಗಳ ಪೈಕಿ ಕಾರ್ಪೊರೇಟ್‌ ಸಂಸ್ಥೆಗಳು ನಿರ್ಮಿಸಿದ್ದು ಶೇ 0.82ರಷ್ಟನ್ನು ಮಾತ್ರ!

ನೆರವು ನೀಡಿದ ಪ್ರಮುಖ ಕಂಪೆನಿಗಳು

* ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌)
* ಮಹೀಂದ್ರಾ ಸಮೂಹ
* ಇನ್ಫೊಸಿಸ್‌ ಪ್ರತಿಷ್ಠಾನ
* ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)
* ಮೈಕ್ರೊಸಾಫ್ಟ್‌ ಇಂಡಿಯಾ
* ಕೋಕಾ ಕೋಲಾ ಇಂಡಿಯಾ

ADVERTISEMENT

ಬೆಂಜ್‌ ಕೇವಲ ಒಂದು!

ಜರ್ಮನಿಯ ವಿಲಾಸಿ ಕಾರು ತಯಾರಿಕಾ ಸಂಸ್ಥೆ ಮರ್ಸಿಡಿಸ್‌ ಬೆಂಜ್‌, ಸಿಎಸ್‌ಆರ್‌ ಅಡಿಯಲ್ಲಿ ಗೋವಾದ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕರಿಗಾಗಿ ಕೇವಲ ಒಂದು ಶೌಚಾಲಯ ನಿರ್ಮಿಸಿದೆ.

ಕರ್ನಾಟಕಕ್ಕೆ ಮಹೀಂದ್ರಾ ಕೊಡುಗೆ

ಮಹೀಂದ್ರಾ ಸಮೂಹವು ಒಟ್ಟು 10 ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಆರ್ಥಿಕ ನೆರವು ನೀಡಿದೆ. ಈ ಪೈಕಿ ಕರ್ನಾಟಕದ ಎರಡು ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಒಂದನ್ನು ಕಡೂರು ತಾಲ್ಲೂಕಿನ ಆಲದಹಳ್ಳಿಯಲ್ಲಿರುವ ಬಾಲಕಿಯರ ಶಾಲೆಯಲ್ಲಿ  ನಿರ್ಮಿಸಲಾಗಿದ್ದರೆ, ಮತ್ತೊಂದನ್ನು ಕಲಬುರ್ಗಿಯ ಔರಾದ್‌ನ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿದೆ.

ಮಾಹಿತಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.