ADVERTISEMENT

ಸಾಮೂಹಿಕ ರಾಜೀನಾಮೆಗೆ ವೈಎಸ್‌ಆರ್‌ಸಿಪಿ ಒತ್ತಾಯ

ಪಿಟಿಐ
Published 30 ಮಾರ್ಚ್ 2018, 12:41 IST
Last Updated 30 ಮಾರ್ಚ್ 2018, 12:41 IST
ಸಾಮೂಹಿಕ ರಾಜೀನಾಮೆಗೆ  ವೈಎಸ್‌ಆರ್‌ಸಿಪಿ ಒತ್ತಾಯ
ಸಾಮೂಹಿಕ ರಾಜೀನಾಮೆಗೆ ವೈಎಸ್‌ಆರ್‌ಸಿಪಿ ಒತ್ತಾಯ   

ಹೈದರಾಬಾದ್: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ (ಎಸ್‌ಸಿಎಸ್‌) ನೀಡಬೇಕು ಎನ್ನುವ ಹೋರಾಟದಲ್ಲಿ ಕೇಂದ್ರ ಸರ್ಕಾರಕ್ಕೆ ಸಂದೇಶ ಕಳುಹಿಸುವ ಸಲುವಾಗಿ, ತೆಲುಗುದೇಶಂ ಪಕ್ಷದ (ಟಿಡಿಪಿ) ಎಲ್ಲ ಸಂಸದರು ರಾಜೀನಾಮೆ ನೀಡಬೇಕು ಎಂದು ವೈಎಸ್‌ಆರ್ ಕಾಂಗ್ರೆಸ್ ಆಗ್ರಹಿಸಿದೆ.

‘ಸಾಮೂಹಿಕವಾಗಿ ಲೋಕಸಭೆ ತ್ಯಜಿಸುವ ಮೂಲಕ ನಾವು ವಿಶೇಷ ಸ್ಥಾನಮಾನ ಹೋರಾಟಕ್ಕೆ ಕೈಜೋಡಿಸುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ನಾವು ನಮ್ಮ ತತ್ವಕ್ಕಾಗಿ ಹೋರಾಡುತ್ತೇವೆ. ರಾಜೀನಾಮೆ ನೀಡಿ ಉಪಚುನಾವಣೆಗೆ ಒತ್ತಾಯಿಸಿದರೆ ಅದು ಕೇಂದ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ’ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಪಿ. ಮಿಥುನ್ ರೆಡ್ಡಿ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಅಧಿಕಾರ ಚಲಾಯಿಸುತ್ತಿರುವುದರಿಂದಾಗಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವ ಯತ್ನ ವಿಫಲವಾಗಿದೆ ಎಂದು ವೈಎಸ್‌ಆರ್‌ಸಿ ಪಕ್ಷ ಹೇಳಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.