ADVERTISEMENT

ಸಾರ್ವಜನಿಕ ವೈಫೈ ಬಳಕೆ ಬೇಡ: ಸಿಇಆರ್‌ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ಸಾರ್ವಜನಿಕ ವೈಫೈ ಬಳಕೆ ಬೇಡ: ಸಿಇಆರ್‌ಟಿ ಎಚ್ಚರಿಕೆ
ಸಾರ್ವಜನಿಕ ವೈಫೈ ಬಳಕೆ ಬೇಡ: ಸಿಇಆರ್‌ಟಿ ಎಚ್ಚರಿಕೆ   

ನವದೆಹಲಿ: ರೈಲು ನಿಲ್ದಾಣ ಅಥವಾ ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯ ಇರುವ ವೈಫೈ ಸೌಲಭ್ಯ ಬಳಸಿಕೊಳ್ಳದಂತೆ ಭಾರತದ ಕಂಪ್ಯೂಟರ್‌ ತುರ್ತುಸ್ಥಿತಿ ಪ್ರತಿಕ್ರಿಯಾ ತಂಡ (ಸಿಇಆರ್‌ಟಿ) ಎಚ್ಚರಿಕೆ ನೀಡಿದೆ. ಇಂತಹ ವೈಫೈಗಳ ಮೂಲಕ ಸೈಬರ್‌ ದಾಳಿಯ ಸಾಧ್ಯತೆ ಇದೆ ಎಂದು ಸಿಇಆರ್‌ಟಿ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ವೈಫೈ ವ್ಯವಸ್ಥೆಯಲ್ಲಿ ಹಲವು ದೌರ್ಬಲ್ಯಗಳಿವೆ. ಈ ಸೌಲಭ್ಯದ ವ್ಯಾಪ್ತಿಯಲ್ಲಿ ಇರುವ ಸೈಬರ್‌ ದಾಳಿಕೋರರು ಈ ದೌರ್ಬಲ್ಯಗಳನ್ನು ಬಳಸಿಕೊಂಡು ವಿವಿಧ ರೀತಿಯ ಹಾನಿ ಮಾಡುವ ಅಪಾಯ ಇದೆ ಎಂದು ಸಿಇಆರ್‌ಟಿ ಎಚ್ಚರಿಸಿದೆ.

ಇಂತಹ ವೈಫೈ ಬಳಸುವವರ ಕ್ರೆಡಿಟ್‌ ಕಾರ್ಡ್‌ ಸಂಖ್ಯೆಗಳು, ಪಾಸ್‌ವರ್ಡ್‌ಗಳು, ಸಂದೇಶಗಳು ಮತ್ತು ಇ–ಮೇಲ್‌ ಸಂದೇಶಗಳನ್ನು ದಾಳಿಕೋರರು ಪಡೆದುಕೊಳ್ಳ
ಬಹುದು. ಹಾಗಾಗಿ ಯಾವಾಗಲೂ ಖಾಸಗಿ ಜಾಲ (ವಿಪಿಎನ್‌) ಅಥವಾ ತಂತಿ ಮೂಲಕ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುವುದು ಉತ್ತಮ. ಇಂತಹ ಸಂಪರ್ಕ
ಗಳಲ್ಲಿ ಎಲ್ಲ ಮಾಹಿತಿಗಳು ಸಂಕೇತ ರೂಪದಲ್ಲಿ ಇರುತ್ತವೆ ಎಂದು ಸಿಇಆರ್‌ಟಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.