ADVERTISEMENT

ಸಿಗದ ಕಾಂಗ್ರೆಸ್ ಸಹಕಾರ: ಮಾಯಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST
ಸಿಗದ ಕಾಂಗ್ರೆಸ್ ಸಹಕಾರ: ಮಾಯಾ
ಸಿಗದ ಕಾಂಗ್ರೆಸ್ ಸಹಕಾರ: ಮಾಯಾ   

ಸೀತಾಪುರ  ಉತ್ತರ ಪ್ರದೇಶ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಕಳೆದ ಐದು ವರ್ಷಗಳಿಂದಲೂ ತಮಗೆ ಸಹಕಾರ ನೀಡುತ್ತಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಬುಧವಾರ ಆರೋಪಿಸಿದ್ದಾರೆ.

ವರದಿಗಾರರ ಜತೆ ಮಾತನಾಡಿದ ಅವರು, `ಎಲ್ಲಾ ವರ್ಗದ ಜನರನ್ನು ತಮ್ಮ ಪಕ್ಷ ಮಾತ್ರ ಸಬಲಗೊಳಿಸಬಲ್ಲುದು~ ಎಂದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಈ ಹಿಂದೆ ಯಾವ ಸರ್ಕಾರವೂ ಕೈಗೊಳ್ಳದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.

`ಜನಸಂಖ್ಯೆಯನ್ನು ಪರಿಗಣಿಸಿದರೆ ಅತಿ ದೊಡ್ಡ ರಾಜ್ಯ ಇದು. ಉತ್ತರಪ್ರದೇಶ ಹಿಂದುಳಿದಿರುವುದನ್ನು ಹೋಗಲಾಡಿಸಲು ಐದು ವರ್ಷಗಳು ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಕೂಡ ನಮಗೆ ನೆರವು ನೀಡಲಿಲ್ಲ~ ಎಂದು ದೂರಿದ್ದಾರೆ.

ರಾಜ್ಯದ ಅಭಿವೃದ್ಧಿಗಾಗಿ ಇನ್ನೂ ಕೆಲಸ ಆಗಬೇಕಿದೆ ಎಂದೂ ಮಾಯಾವತಿ ತಿಳಿಸಿದ್ದಾರೆ. ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಿಎಸ್‌ಪಿ ಜನರ ಪರವಾಗಿರುವ ಉತ್ತಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.