ADVERTISEMENT

ಸಿಪಿಎಂ: ಕಾರಟ್ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಕೋಯಿಕ್ಕೊಡ್(ಪಿಟಿಐ): ಸಿಪಿಎಂನ ಹಿರಿಯ ನಾಯಕ ಪ್ರಕಾಶ್ ಕಾರಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.

ಸೋಮವಾರ ಇಲ್ಲಿ ಕೊನೆಗೊಂಡ ಪಕ್ಷದ 20ನೇ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿದ್ದು ವಿವಿಧ ರಾಜ್ಯಗಳ 700ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪಕ್ಷದ ಅತ್ಯುನ್ನತ ಸಮಿತಿ ಎನಿಸಿದ ಪಾಲಿಟ್‌ಬ್ಯೂರೊದಲ್ಲಿ ಈ ಬಾರಿ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷ ಎ.ಕೆ. ಪದ್ಮನಾಭನ್, ಪಶ್ಚಿಮ ಬಂಗಾಳ ಪ್ರತಿಪಕ್ಷದ ನಾಯಕ ಸೂರ್ಯಕಾಂತ ಮಿಶ್ರಾ, ಕೇರಳದ ಮಾಜಿ ಸಚಿವೆ ಎಂ.ಎ. ಬೇಬಿ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರಿಗೆ ಅವಕಾಶ ಸಿಕ್ಕಿಲ್ಲ.

ಗರಿಷ್ಠ ಅವಧಿ ಮೂರು ವರ್ಷ:
ಪಕ್ಷದ ಎಲ್ಲ ಹಂತಗಳಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಒಬ್ಬರಿಗೆ ಗರಿಷ್ಠ ಮೂರು ಅವಧಿಗೆ ನೀಡುವ ಮಹತ್ವದ ನಿರ್ಣಯವನ್ನೂ ಸಮಾವೇಶದಲ್ಲಿ ಅಂಗೀಕರಿಸಲಾಗಿದೆ.

ಇದೀಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿರುವ ಪ್ರಕಾಶ್ ಕಾರಟ್ ಅವರ ಅವಧಿಯೂ ಇದೇ ಕೊನೆಯಾಗಲಿದೆ. ಆದರೆ ಪಕ್ಷದ ಇಲ್ಲವೆ ಸರ್ಕಾರದಲ್ಲಿ ಸ್ಥಾನಮಾನ ಪಡೆಯುವ ನಾಯಕರ ಗರಿಷ್ಠ ವಯಸ್ಸನ್ನು ನಿರ್ಧರಿಸುವ ಪ್ರಸ್ತಾಪವನ್ನು ಸಭೆ ಪರಿಗಣಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.