ADVERTISEMENT

ಸಿಬಿಎಸ್‌ಇ ಐದು ವಲಯಗಳ ಫಲಿತಾಂಶ ಪ್ರಕಟ: ಉತ್ತೀರ್ಣ ಪ್ರಮಾಣ ಶೇ 5ರಷ್ಟು ಇಳಿಕೆ

ಪಿಟಿಐ
Published 3 ಜೂನ್ 2017, 9:58 IST
Last Updated 3 ಜೂನ್ 2017, 9:58 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು(ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.

ಪ್ರಸಕ್ತ ವರ್ಷ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಕಳೆದ ವರ್ಷ ಇದ್ದ ಶೇಕಡಾ 96.21ರಿಂದ ಶೇ 90.95ಕ್ಕೆ ಕುಸಿದಿದ್ದು, ಒಟ್ಟಾರೆ ಶೇ 5ರಷ್ಟು ಇಳಿಕೆಯಾಗಿದೆ ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.

ಸಿಬಿಎಸ್‌ಇಯು ರಾಜಧಾನಿ ದೆಹಲಿ ಸೇರಿದಂತೆ ಐದು ವಲಯಗಳ 10ನೇ ತರಗತಿ ಫಲಿತಾಂಶನ್ನು ಪ್ರಕಟಿಸಿದೆ. ಅಲಹಾಬಾದ್‌, ಚೆನ್ನೈ, ಡೆಹರಾಡೂನ್‌, ತಿರುವನಂತಪುರ ಇತರ ನಾಲ್ಕು ವಲಯಗಳು.

ADVERTISEMENT

ತಿರುವನಂತಪುರ ವಲಯ ವಿದ್ಯಾರ್ಥಿಗಳ ಫಲಿತಾಂಶ ಅತಿ ಹೆಚ್ಚು ಶೇಕಡಾ 99.85ರಷ್ಟಿದೆ. ಮದ್ರಾಸ್ ವಲಯ ಶೇ 99.62ರಷ್ಟು ಮತ್ತು ಅಲಹಾಬಾದ್‌ ವಲಯ ಶೇ 98.23ರಷ್ಟು ಫಲಿತಾಂಶ ಪಡೆದಿವೆ.

ಪ್ರಸಕ್ತ ವರ್ಷ ದೆಹಲಿ ವಲಯ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಕಳೆದ ವರ್ಷ ಇದ್ದ ಶೇಕಡಾ 91.06ರಿಂದ ಶೇ 78.09ಕ್ಕೆ ಕುಸಿದಿದ್ದು, ಒಟ್ಟಾರೆ ಶೇ 13ರಷ್ಟು ಇಳಿಕೆಯಾಗಿದೆ.

ಉಳಿಂದಂತೆ ಇತರ ವಲಯಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಒಟ್ಟು 16,67,573 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಸಿಬಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ Cbse.nic.in ಮತ್ತು Cbseresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.