ADVERTISEMENT

ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

ಏಜೆನ್ಸೀಸ್
Published 26 ಮೇ 2018, 13:00 IST
Last Updated 26 ಮೇ 2018, 13:00 IST
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ   

ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು ಗಾಜಿಯಾಬಾದ್‌ನ ಮೇಘನಾ ಶ್ರೀವಾಸ್ತವ ಮೊದಲ ಟಾಪರ್‌ ಸ್ಥಾನ ಪಡೆದುಕೊಂಡಿದ್ದಾರೆ.

ಮೇಘನಾ ಶ್ರೀವಾಸ್ತವ 500 ಅಂಕಗಳಿಗೆ 499 ಅಂಕಗಳನ್ನು ಪಡೆದುಕೊಂಡಿದ್ದಾರೆ.

ದೇಶದ ವಲಯವಾರು ಫಲಿತಾಂಶದಲ್ಲಿ ತಿರುವನಂತಪುರ ವಲಯಕ್ಕೆ ಶೇ 97.32ರಷ್ಟು ಫಲಿತಾಂಶ ಬಂದಿದೆ.  ಚೆನ್ನೈ ವಲಯ (93.87)ಎರಡನೇ ಸ್ಥಾನ ಪಡೆದುಕೊಂಡಿದೆ. ದೆಹಲಿ ವಲಯದಲ್ಲಿ ಶೇ 89 ರಷ್ಟು ಫಲಿತಾಂಶ ಬಂದಿದೆ.  ಒಟ್ಟಾರೆ ಫಲಿತಾಂಶದಲ್ಲಿ  ಶೇ 88.31 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ 78.99 ಬಾಲಕರು ಪಾಸಾಗಿದ್ದಾರೆ.

ADVERTISEMENT

ಮಾರ್ಚ್ 5ರಿಂದ ಏಪ್ರಿಲ್‌ 13ರವರೆಗೆ ಪರೀಕ್ಷೆ ನಡೆದಿತ್ತು.

ಒಟ್ಟು 11.86 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ದೇಶದ 4,138 ಕೇಂದ್ರಗಳಲ್ಲಿ ಹಾಗೂ ವಿದೇಶಗಳಲ್ಲಿನ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಫಲಿತಾಂಶ cbse.examresults.net, cbseresults.nic.in ಮತ್ತು  results.gov.in. ವೆಬ್‌ಸೈಟ್‌ಗಳಲ್ಲಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.