ಬಳ್ಳಾರಿ : ~ನಮ್ಮ ರಾಜಕೀಯ ಮತ್ತು ವೈಯಕ್ತಿಕ ಏಳ್ಗೆಗೆ ತಾಯಿ ಸುಷ್ಮಾ ಸ್ವರಾಜ್ ಅವರೇ ಕಾರಣ. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮುನ್ನೆಡೆಯುತ್ತಿದ್ದೆೀವೆ~ ಎಂದು ~ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರ ಹೊರ ವಲಯದ ಶಿವಪುರ ಬಳಿ 98.66 ಕೋಟಿ ರೂ. ವೆಚ್ಚದ ನಗರ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
~ನಮ್ಮ ತಾಯಿ ಸುಷ್ಮಾಸ್ವರಾಜ್ ಯಾವುದೋ ರಾಜಕೀಯ ಕಾರಣಕ್ಕೆ ಹೀಗೆ ಹೇಳಿರಬಹುದು. ಸುಷ್ಮಾ ಸ್ವರಾಜ್ ಮತ್ತು ನಮ್ಮ ನಡುವಿನ ಸಂಬಂಧ ವೈಯಕ್ತಿಕ ಸಂಬಂಧವೇ ಹೊರತು ರಾಜಕೀಯ ಸಂಬಂಧವಲ್ಲ~ ಎಂದು ಸ್ಪಷ್ಟಪಡಿಸಿದರು.
~ಸುಷ್ಮಾ ಸ್ವರಾಜ್ ಅವರು ನಮ್ಮ ಪಾಲಿನ ದೇವರು ಮತ್ತು ತಾಯಿ ಇದ್ದಂತೆ. ತಾಯಿಯ ಹೇಳಿಕೆಯಿಂದ ಮಕ್ಕಳು ಬೇಸರಪಟ್ಟುಕೊಳ್ಳುವುದಿಲ್ಲ. ಅವರು ಬೇಡವೆಂದರೆ ಮನೆಗೆ ಹೋಗುತ್ತೇವೆ~ ಎಂದು ಹೇಳಿದರು.
~ಕಳೆದ 1999ರ ಲೋಕಸಭೆ ಚುನಾವಣೆಯಿಂದ ಈವರೆಗೆ ಒಂದೇ ಕುಟುಂಬದ ಸದಸ್ಯರಂತೆ ಇದ್ದೆೀವೆ.
ತಾಯಿ ಏನೇ ಬೈಯ್ದರೂ ಮಕ್ಕಳಾದ ನಾವು ಬೇಸರಪಟ್ಟುಕೊಳ್ಳುವುದಿಲ್ಲ. ಇಂದಿಗೂ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇವೆ ~ ಎಂದರು. ~ಸುಷ್ಮಾ ಸ್ವರಾಜ್ ಅವರು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಬಗ್ಗೆ ಸಂಪೂರ್ಣ ತಿಳಿದಿಲ್ಲ. ಅವರನ್ನು ಸಂಪರ್ಕಿಸಲು ನಾವೂ ಪ್ರಯತ್ನ ಪಟ್ಟೆವು. ಆದರೆ, ಸಂಪರ್ಕ ಸಾಧ್ಯವಾಗಿಲ್ಲ. ಶೀಘ್ರವೇ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತೇವೆ. ಸುಷ್ಮಾ ಸ್ವರಾಜ್‌ರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಾಧ್ಯಮದ ಮೂಲಕ ತಪ್ಪು ಸಂದೇಶ ರವಾನಿಸಲಾಗುತ್ತಿದೆ~ ಎಂದು ಸಚಿವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.