ನವದೆಹಲಿ (ಐಎಎನ್ಎಸ್): ಕೇಂದ್ರ ಸರ್ಕಾರವು ಮಂಗಳವಾರ 2013ರ ಸೈಬರ್ ಭದ್ರತಾ ನೀತಿ ಅನಾವರಣಗೊಳಿಸಿದೆ.
ಅಂತರ್ಜಾಲದ ಮೂಲಕ ಅಮೆರಿಕ ರಹಸ್ಯವಾಗಿ ಮಾಹಿತಿ ಸಂಗ್ರಹಿಸಿರುವುದು ಬಯಲಾಗಿರುವ ಬೆನ್ನಲ್ಲಿಯೇ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ.
2011ರಲ್ಲಿ ದೇಶದಲ್ಲಿ 13,000 ಸೈಬರ್ ದಾಳಿ ಪ್ರಕರಣಗಳು ವರದಿಯಾಗಿವೆ.
ಈ ನೀತಿಯ ಅಗತ್ಯ ತಿಳಿಸಿರುವ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ` ಒಳಗಿನಿಂದ ಹಾಗೂ ಹೊರಗಿನಿಂದ ಸೈಬರ್ ಭದ್ರತೆಗೆ ಆತಂಕ ಎದುರಾಗುವ ಸಂದರ್ಭಗಳು ಇರುತ್ತವೆ. ಈ ಬಗ್ಗೆ ಮಾಹಿತಿ ಪಡೆಯಲು ಕಾರ್ಯತಂತ್ರ ರೂಪಿಸುವುದು ನಮ್ಮ ಉದ್ದೇಶವಾಗಿದೆ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.