ADVERTISEMENT

ಸೊಸೆ ಮೇಲೆ ಅಮಿತಾಬ್‌ ಮುನಿಸು !

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 11:15 IST
Last Updated 4 ಆಗಸ್ಟ್ 2016, 11:15 IST
ಸೊಸೆ ಮೇಲೆ ಅಮಿತಾಬ್‌ ಮುನಿಸು !
ಸೊಸೆ ಮೇಲೆ ಅಮಿತಾಬ್‌ ಮುನಿಸು !   

ಮುಂಬೈ: ಕರಣ್ ಜೋಹರ್ ನಿರ್ದೇಶನದ ‘ಎ ದಿಲ್ ಹೈ ಮುಷ್ಕಿಲ್‌’ ಸಿನಿಮಾದಲ್ಲಿ ರಣಬೀರ್ ಕಪೂರ್ ಜತೆ ಹಸಿ ಹಸಿ ದೃಶ್ಯಗಳಲ್ಲಿ  ಕಾಣಿಸಿಕೊಂಡಿರುವ ಐಶ್ವರ್ಯ ರೈ ಮೇಲೆ ಅವರ ಮಾವ ಬಾಲಿವುಡ್‌ನ ಬಿಗ್ ಬಿ ಮುನಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಐಶ್ವರ್ಯ ಮತ್ತು ಕರಣ್ ಚುಂಬನದ ದೃಶ್ಯಗಳನ್ನು ತೆಗೆದುಹಾಕುವಂತೆ ಅಮಿತಾಬ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಚ್ಚನ್ ಕುಟುಂಬವು ಐಶ್ವರ್ಯ ಅವರ ಸಿನಿಮಾಗಳ ವಿಷಯದಲ್ಲಿ ತಲೆ ಹಾಕುವುದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ಅವರ ಕುಟುಂಬದ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿವೆ.

ರಣಬೀರ್ ಕಪೂರ್, ಐಶ್ವರ್ಯ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯದ ‘ಎ ದಿಲ್ ಹೈ ಮುಷ್ಕಿಲ್‌’ ಸಿನಿಮಾ ಅಕ್ಟೋಬರ್ 28ರಂದು ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.