ADVERTISEMENT

ಸೋನಿಯಾ ಗಾಂಧಿಗೆ ಶಸ್ತ್ರಚಿಕಿತ್ಸೆ ?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2011, 8:00 IST
Last Updated 4 ಆಗಸ್ಟ್ 2011, 8:00 IST
ಸೋನಿಯಾ ಗಾಂಧಿಗೆ ಶಸ್ತ್ರಚಿಕಿತ್ಸೆ ?
ಸೋನಿಯಾ ಗಾಂಧಿಗೆ ಶಸ್ತ್ರಚಿಕಿತ್ಸೆ ?   

ನವದೆಹಲಿ (ಪಿಟಿಐ): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿದೇಶದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ಗುರುವಾರ ತಿಳಿಸಿದ್ದಾರೆ.

ಇತ್ತೀಚೆಗೆ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಸೋನಿಯಾ ಅವರಿಗೆ ಶಸ್ತ್ರಚಿಕಿತ್ಸೆಯ ಸಲಹೆಯನ್ನು ವೈದ್ಯ ರು ನೀಡಿದ್ದರು ಅದಕ್ಕಾಗಿ ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ದ್ವಿವೇದಿ ಸ್ಪಷ್ಟಪಡಿಸಿದರು.

ಸದ್ಯ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು, ಅವರ ಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು.  ಆದರೆ ನಂತರ ಅವರು ಶಸ್ತ್ರಚಿಕಿತ್ಸೆ ನಡೆದ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ತಿಳಿಸಿದುರ. ಇನ್ನೂ ಮೂರು ವಾರಗಳ ಕಾಲ ಸೋನಿಯಾ ವಿದೇಶದಲ್ಲೆ ಉಳಿಯಲಿದ್ದಾರೆ ಎಂಬ ಮಾಹಿತಿಯನ್ನು ದ್ವಿವೇದಿ ನೀಡಿದ್ದಾರೆ.

ತಮ್ಮ ಅನುಪಸ್ಥಿತಿಯಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲು ಸೋನಿಯಾ ಅವರು ರಾಹುಲ್ ಗಾಂಧಿ, ಎ.ಕೆ. ಆಂಟನಿ, ಅಹಮದ್ ಪಟೇಲ್ ಹಾಗೂ ಜನಾರ್ದನ ದ್ವಿವೇದಿ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ ಎಂದು ಅವರು ಪ್ರಕಟಿಸಿದರು.

ಆದರೆ, ಸೋನಿಯಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆಯೇ? ಎಲ್ಲಿ? ಎಂಬ ಮಾಹಿತಿಯನ್ನು ಪಕ್ಷ ಗೌಪ್ಯವಾಗಿರಿಸಿದೆ. ಅವರು ಅಮೆರಿಕಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT