ADVERTISEMENT

ಸೋಲು ಒಪ್ಪಿಕೊಂಡ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 10:00 IST
Last Updated 8 ಡಿಸೆಂಬರ್ 2013, 10:00 IST

ನವದೆಹಲಿ (ಪಿಟಿಐ): ದೆಹಲಿ, ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಎದುರಾದ ಸೋಲನ್ನು ಒಪ್ಪಿಕೊಂಡಿರುವ ಕಾಂಗ್ರೆಸ್, ಫಲಿತಾಂಶದಿಂದ ನಿರಾಸೆ ಮೂಡಿಸಿದೆ ಪ್ರತಿಕ್ರಿಯಿಸಿದೆ.

‘ದೆಹಲಿ,ಮಧ್ಯಪ್ರದೇಶ ಹಾಗೂ ರಾಜಸ್ತಾನದ ಫಲಿತಾಂಶಗಳು ನಿರಾಸೆ ಮೂಡಿಸಿವೆ.ಕಾಂಗ್ರೆಸ್‌ ಸೋಲು  ಕಂಡಿರುವುದನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಪಕ್ಷದ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲಾ ನುಡಿದಿದ್ದಾರೆ.

ಫಲಿತಾಂಶದ ಪ್ರತಿಕ್ರಿಯೆಗಳು...

ADVERTISEMENT

* ‘ಕಾಂಗ್ರೆಸ್‌ ಏಕವ್ಯಕ್ತಿ ಪ್ರದರ್ಶನದ ಪಕ್ಷವಲ್ಲ. ಇದೊಂದು ಸಾಮೂಹಿಕ ಸೋಲು ಹಾಗೂ ವೈಫಲ್ಯ. ಸೋಲಿನ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ’

–ಜಯಂತಿ ನಟರಾಜನ್, ಕೇಂದ್ರ ಸಚಿವೆ‌

* ‘ಮಧ್ಯಪ್ರದೇಶ ಫಲಿತಾಂಶ ತುಂಬಾ ನಿರಾಶಾದಾಯಕ. ಪಕ್ಷದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ’

–ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ

* ಆಮ್‌ ಆದ್ಮ ಪಕ್ಷದ ಉದಯ ಉಭಯ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಕಳವಳದ ಸಂಗತಿ ಎಂಬುದನ್ನು ಒಪ್ಪಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್‌ ಪ್ರತಾಪ್‌ ರೂಡಿ, ‘ದೆಹಲಿಯಲ್ಲಿ ಒಂದು ಸ್ಥಳೀಯ ಪಕ್ಷಕ್ಕೆ ಸ್ಥಾನ ದೊರೆತಿದೆ. ಪ್ರಾದೇಶಿಕ ಪ್ರಣಾಳಿಕೆ ರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸುತ್ತಿದೆ. ಆಮ್‌ ಆದ್ಮಿ ಪಕ್ಷದ ಮತಗಳು ನೈಜವಾಗಿ ಬಿಜೆಪಿಗೆ ಬರಬೇಕಿತ್ತು. ಆಗ ಬಿಜೆಪಿಗೆ ಅಮೋಘ ಜಯ ಲಭಿಸುತ್ತಿತ್ತು. ಆದರೆ ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಲ್ಲಿ ಬಿಜೆಪಿ ವಿಫಲವಾಯಿತು.ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಲು ಅಸಮರ್ಥವಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿದವು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.