ನವದೆಹಲಿ (ಐಎಎನ್‌ಎಸ್): ಯಾವಾಗಲೂ ಮೃದು ಧ್ವನಿಯಿಂದಲೇ ಲೋಕಸಭೆ ಕಲಾಪವನ್ನು ನಿಭಾಯಿಸುವ ಸ್ಪೀಕರ್ ಮೀರಾ ಕುಮಾರ್, ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ಅಸಾಮಾನ್ಯವೆಂಬಂತೆ ಸುಗಮ ಕಲಾಪಕ್ಕೆ ಅಡ್ಡಿಪಡಿಸಿದ ಕೆಲವು ಪುರುಷ ಸಂಸದರ ಮೇಲೆ ರೇಗಿದ ಅಪರೂಪ ಪ್ರಸಂಗ ಎದುರಾಯಿತು.
ಸಮಾಜವಾದಿ ಪಕ್ಷದ ನಾಯಕರನ್ನು ಲಖನೌದಲ್ಲಿ ಸೋಮವಾರ ಗೃಹಬಂಧನಕ್ಕೆ ಒಳಪಡಿಸಿದ ಘಟನೆಯನ್ನು ಪ್ರಸ್ತಾಪಿಸಿ, ಪ್ರಶಾವಧಿಯಲ್ಲಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದಾಗ ಸಿಡಿಮಿಡಿಕೊಂಡ ಮೀರಾ, ‘ಹಿಂದಕ್ಕೆ ಹೋಗಿ ನಿಮ್ಮ ಆಸನಗಳಲ್ಲಿ ಕುಳಿತು ಕೊಳ್ಳಿರಿ; ಶಾಂತಿಯಿಂದ ಇರಿ, ಶಿಸ್ತು ಪಾಲಿಸಿ’ ಎಂದಾಗ, ಅವರೆಲ್ಲ ವಾಪಸ್ ತಮ್ಮ ಆಸನಗಳಿಗೆ ಮರಳಿದರು. ಸ್ಪೀಕರ್ ಸಿಟ್ಟಿಗೆ ಕಾರಣವಾದ ಈ ಘಟನೆಯ ಬಗ್ಗೆ ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಕ್ಷಮೆಯಾಚಿಸಿದಾಗ, ತಾವು ಆಕ್ರೋಶಗೊಂಡಿಲ್ಲ ಎಂದು ಮೀರಾ ಸೌಮ್ಯವಾಗಿಯೇ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.