ADVERTISEMENT

ಸ್ಥಿರಾಸ್ತಿ ಲೆಕ್ಕ ಸಲ್ಲಿಸದ ಐಎಎಸ್ ಅಧಿಕಾರಿಗಳ ವೇತನ ಹೆಚ್ಚಳಕ್ಕೆ ತಡೆ?

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): 2012-13ನೇ ಸಾಲಿಗೆ ಸ್ಥಿರಾಸ್ತಿ ಲೆಕ್ಕಪತ್ರ ಸಲ್ಲಿಸದ 127 ಐಎಎಸ್ ಅಧಿಕಾರಿಗಳ ವಾರ್ಷಿಕ ವೇತನ ಹೆಚ್ಚಳ ತಡೆಹಿಡಿಯಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಇವರಲ್ಲಿ ಏಳು ಅಧಿಕಾರಿಗಳು ಕರ್ನಾಟಕ ಕೇಡರ್‌ಗೆ ಸೇರಿದವರು.

ಈ ಅಧಿಕಾರಿಗಳ ವೇತನ ಹೆಚ್ಚಳ ತಡೆಹಿಡಿಯುವ ಜತೆಗೆ ನೇಮಕಾತಿ ಸ್ಥಾನ ತೋರಿಸದೆ ಖಾಲಿ ಕೂರಿಸುವ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶ ಕೇಡರ್‌ನ 32, ಉತ್ತರ ಪ್ರದೇಶದ 16, ಪಂಜಾಬ್‌ನ 14,  ಒಡಿಶಾದ 12, ಆಂಧ್ರದ 8, ತಮಿಳುನಾಡಿನ ಇಬ್ಬರು ಅಧಿಕಾರಿಗಳು ಇವರಲ್ಲಿ ಸೇರಿದ್ದಾರೆ.ರಾಷ್ಟ್ರದಲ್ಲಿ 6154 ಐಎಎಸ್ ಹುದ್ದೆಗಳಿದ್ದು, ಇವುಗಳಲ್ಲಿ 1885 ಬಡ್ತಿ ಹುದ್ದೆಗಳಾಗಿವೆ. ನಿಯಮದ ಪ್ರಕಾರ ಐಎಎಸ್ ಅಧಿಕಾರಿಯು ಪ್ರತಿ ವರ್ಷ ಜನವರಿ ಅಂತ್ಯದೊಳಗೆ ಸ್ಥಿರಾಸ್ತಿ ಲೆಕ್ಕಪತ್ರ ವಿವರವನ್ನು ಸಲ್ಲಿಸಬೇಕು.

ಇದರ ಜತೆಗೆ 216 ಐಎಎಸ್ ಅಧಿಕಾರಿಗಳು 2010-11ರ ಸಾಲಿನ ಸ್ಥಿರಾಸ್ತಿ ಲೆಕ್ಕಪತ್ರವನ್ನು ಇನ್ನೂ ಸಲ್ಲಿಸಿಲ್ಲ. ಇವರಲ್ಲಿ ಕರ್ನಾಟಕ ಕೇಡರ್‌ನ 24, ಪಶ್ಚಿಮ ಬಂಗಾಳದ 30, ಜಮ್ಮು ಕಾಶ್ಮೀರದ 19, ಬಿಹಾರದ 16 ಅಧಿಕಾರಿಗಳು ಸೇರಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.