ADVERTISEMENT

ಸ್ಫೋಟ: ಬಿಜೆಪಿ ಕಾರ್ಯಕರ್ತರು ಸೇರಿ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ರಾಯಪುರ (ಐಎಎನ್‌ಎಸ್): ನಕ್ಸಲೀಯರ ಪ್ರಭಾವವಿರುವ ಛತ್ತೀಸ್‌ಗಡದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅರಣ್ಯ ಪ್ರದೇಶದ ಮೂಲಕ ಹೊರಟಿದ್ದ ಶಾಸಕರ ವಾಹನ ಮತ್ತು ಬೆಂಗಾವಲು ಪಡೆಯ ವಾಹನಗಳನ್ನು ನಕ್ಸಲೀಯರು ನೆಲಬಾಂಬ್ ಸ್ಫೋಟಿಸಿ ಉಡಾಯಿಸಿದರು.

ಪಕ್ಷದ ಇಬ್ಬರು ಹಿರಿಯ ಕಾರ್ಯಕರ್ತರು ಮತ್ತು ವಾಹನದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರು. ವಿಜಾಪುರ ಶಾಸಕ ಮಹೇಶ್ ಗಗ್ಡಾ, ಜಿಲ್ಲಾಧಿಕಾರಿ ರಜತ್ ಕುಮಾರ್ ಅವರು ಯಾವುದೇ ಅಪಾಯವಿಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.