ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಕೋಲ್ಕತ್ತದಲ್ಲಿ `ಟಿನ್‌ಟಿನ್~
ಕೋಲ್ಕತ್ತ (ಪಿಟಿಐ):
ವಿದೇಶಗಳಲ್ಲಿ ಜನಪ್ರಿಯವಾಗಿರುವ ಟಿನ್‌ಟಿನ್ ಕಾಮಿಕ್ಸ್ ಮಾದರಿಯಲ್ಲಿ ಕೋಲ್ಕತ್ತಾದ ಕಲಾವಿದ ಜಹಾಂಗೀರ್ ಕೇರಾವಾಲಾ `ದಿ ಅಡ್ವೆಂಚರ್ಸ್‌ ಆಫ್ ಥಿಂಪಾ~ ಎಂಬ ಕಾಮಿಕ್ಸ್ ರಚಿಸಿದ್ದಾರೆ. ಥಿಂಪಾ ಎಂಬ 14 ವರ್ಷದ ಬಾಲಕನ ಸಾಹಸವನ್ನು ಇದರಲ್ಲಿ ಚಿತ್ರಿಸಲಾಗಿದೆ. ಈತನ ತಂದೆ ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಕಳ್ಳರ ಗ್ಯಾಂಗ್ ಹಿಡಿಯಲು ಆತ ಮಾಡುವ ಸಾಹಸ ಸೇರಿದಂತೆ ಹಲವು ಹೊಸ ಕಥೆಗಳನ್ನು ಕಾಮಿಕ್ಸ್ ರೂಪದಲ್ಲಿ ಚಿತ್ರಿಸಲಾಗಿದೆ.

ಮಾಧುರಿ ಮೇಣದ ಪ್ರತಿಮೆ
ಮುಂಬೈ (ಪಿಟಿಐ): ಲಂಡನ್‌ನ ಸುಪ್ರಸಿದ್ಧ ಮ್ಯಾಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಂಗ್ರಹಾಲಯದಲ್ಲಿ ಹಿಂದಿ ನಟಿ ಮಾಧುರಿ ದೀಕ್ಷಿತ್ ಪ್ರತಿಮೆ ಮಾರ್ಚ್ ಮೊದಲ ವಾರದಲ್ಲಿ ಅನಾವರಣಗೊಳ್ಳಲಿದೆ.
ಕಾಶ್ಮೀರದಲ್ಲಿ ಹಿಮಪಾತ

ಶ್ರೀನಗರ (ಪಿಟಿಐ): ಭಾರಿ ಹಿಮಪಾತದಿಂದ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಜಿನಿಂದಾಗಿ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಇಳಿಯಬೇಕಿದ್ದ ವಿಮಾನಗಳ ಹಾರಾಟ ರದ್ದುಗೊಳಿಸಲಾಯಿತು.

ಅಭಿಷೇಕ್‌ಗೆ 36
ಮುಂಬೈ (ಪಿಟಿಐ): ನಟ ಅಭಿಷೇಕ್ ಬಚ್ಚನ್ ಭಾನುವಾರ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಸ್ನೇಹಿತರಿಂದ ಶುಭಾಶಯಗಳ ಸುರಿಮಳೆಯಾಗಿದೆ.
ಎರಡು ತಿಂಗಳ ಹಿಂದೆ ಪುತ್ರಿ ಜನಿಸಿರುವುದರಿಂದ ಅಭಿಷೇಕ್‌ಗೆ ಈ ವರ್ಷದ ಹುಟ್ಟುಹಬ್ಬ ವಿಶೇಷವಾಗಿತ್ತು. ಪತ್ನಿ ಐಶ್ವರ್ಯ ಮತ್ತು `ಭೇಟಿ-ಬಿ~ ಜತೆ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಗುಲ್ಮಾರ್ಗ್, ಪಹಲ್ಗಾವ್, ಕುಪ್ವಾರಾಗಳಲ್ಲಿ ಹಿಮಪಾತದೊಂದಿಗೆ ಮಳೆಯೂ ಆಗುತ್ತಿದೆ. ಈ ನಗರಗಳಲ್ಲಿ ಉಷ್ಣಾಂಶವೂ ಶೂನ್ಯದಿಂದ ಕೆಳಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT