ADVERTISEMENT

ಹಜಾರೆಗೆ ಟ್ಯಾಗೋರ್ ಸ್ಮಾರಕ ಶಾಂತಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST

ನವದೆಹಲಿ (ಐಐಪಿಎಂ): ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕ ಅಣ್ಣಾ ಹಜಾರೆ ಅವರಿಗೆ ಇದೀಗ ಇನ್ನೊಂದು ಗೌರವ ಸಂದಿದೆ. ಈ ಸಲದ ‘ಐಐಪಿಎಂ ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ’ಗೆ ಅವರು ಭಾಜನರಾಗಿದ್ದಾರೆ.

 ಮ್ಯಾನೇಜ್‌ಮೆಂಟ್ ಗುರು ಅರಿಂದಮ್ ಚೌದರಿ ಅವರ ಐಐಪಿಎಂ ಶಿಕ್ಷಣ ಸಂಸ್ಥೆ ಸಮೂಹ ಸ್ಥಾಪಿಸಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ರೂ 1 ಕೋಟಿ  ನಗದು, ಪ್ರಮಾಣ ಪತ್ರ ಒಳಗೊಂಡಿದೆ. ಇದರ ಜತೆಗೇ ಗ್ರಾಮೀಣ ಉದ್ಯಮಶೀಲತೆ ಮತ್ತು ವ್ಯವಹಾರ ಕುರಿತ ಹಣಕಾಸು ನೆರವು (ಫೆಲೋಶಿಪ್) ಯೋಜನೆಯನ್ನು ಕೂಡ ಐಐಪಿಎಂ ಘೋಷಿಸಿದೆ.
 
ಇದರಲ್ಲಿ ದೇಶದ ವಿವಿಧೆಡೆಯ 50 ಗ್ರಾಮೀಣ ಯುವಜನರನ್ನು ಆಯ್ಕೆ ಮಾಡಿ, ಅವರಿಗೆ ಉದ್ಯಮಶೀಲತೆ, ನಾಯಕತ್ವ ತರಬೇತಿ, ಮಾಸಿಕ 4000 ರೂಪಾಯಿ ಫೆಲೋಶಿಪ್ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.