ADVERTISEMENT

ಹಜಾರೆ ಬಳಗದ ಪ್ರಮುಖ ಪ್ರಸ್ತಾವಗಳಿಗೂ ಸರ್ಕಾರಿ ಕರಡು ಕೊಕ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 11:00 IST
Last Updated 22 ಜೂನ್ 2011, 11:00 IST
ಹಜಾರೆ ಬಳಗದ ಪ್ರಮುಖ ಪ್ರಸ್ತಾವಗಳಿಗೂ ಸರ್ಕಾರಿ ಕರಡು ಕೊಕ್
ಹಜಾರೆ ಬಳಗದ ಪ್ರಮುಖ ಪ್ರಸ್ತಾವಗಳಿಗೂ ಸರ್ಕಾರಿ ಕರಡು ಕೊಕ್   

ನವದೆಹಲಿ (ಪಿಟಿಐ): ದೂರವಾಣಿ ಮೇಲೆ ಕಣ್ಗಾವಲು,  ವಿದೇಶೀ ನ್ಯಾಯಾಲಯಗಳಿಗೆ ಅಗತ್ಯ ಮಾಹಿತಿ ನೆರವಿಗಾಗಿ ಅಧಿಕೃತ ಪತ್ರ ರವಾನೆ ಮತ್ತು ಭ್ರಷ್ಟಾಚಾರ ಅವಕಾಶಗಳನ್ನು ಕಡಿಮೆಗೊಳಿಸುವ ಸಲುವಾಗಿ ಕೆಲಸದ ಬದಲಾವಣೆ ಅಧಿಕಾರ ನೀಡಿಕೆಯಂತಹ ಪ್ರಸ್ತಾವಗಳನ್ನು ಅಣ್ಣಾ ಹಜಾರೆ ಬಳಗ ತಮ್ಮ ಜನಲೋಕಪಾಲ ಮಸೂದೆ ಕರಡಿನಲ್ಲಿ ಮಂಡಿಸಿದ್ದು, ಸರ್ಕಾರಿ ಕರಡು ಮಸೂದೆ ಈ ಪ್ರಸ್ತಾವಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

ಲೋಕಪಾಲ ಮಸೂದೆ ರಚನೆಗಾಗಿ ರೂಪಿಸಿದ ಜಂಟಿ ಸಮಿತಿಗೆ  ಹಜಾರೆ ಬಳಗ ಸಲ್ಲಿಸಿದ ಪ್ರಸ್ತಾವಗಳಲ್ಲಿ ಅಗತ್ಯ ಸೂಕ್ತ ತನಿಖೆಗಾಗಿ ಆಧುನಿಕ  ಉಪಕರಣ ಹೊಂದುವ ಹಾಗೂ ಎಲ್ಲ ಸಂಸತ್ ಸದಸ್ಯರು ಘೋಷಿಸಿದ ಆಸ್ತಿಪಾಸ್ತಿಯ ತನಿಖೆ ನಡೆಸುವ  ಅಧಿಕಾರ ಉದ್ದೇಶಿತ ಲೋಕಪಾಲ ಸಂಸ್ಥೆಗೆ ಇರಬೇಕು ಎಂಬ ಪ್ರಸ್ತಾವಗಳೂ ಸೇರಿವೆ.

ಜನ ಲೋಕಪಾಲ ಮಸೂದೆಯಂತೆ ಲೋಕಪಾಲ ಸಂಸ್ಥೆಯ ಪೀಠವನ್ನು ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ರಚಿತವಾದ ನಿಯೋಜಿತ ಪ್ರಾಧಿಕಾರ ಎಂಬುದಾಗಿ ಪರಿಗಣಿಸಬೇಕು. ಇದಕ್ಕೆ ಮಾಹಿತಿ ಸಂದೇಶಗಳು ಅಥವಾ ದೂರವಾಣಿ, ಇಂಟರ್ ನೆಟ್ ಮತ್ತು ಬೇರಾವುದೇ ಮಾಧ್ಯಮದ ಮೂಲಕ ರವಾನೆಯಾಗುವ ಧ್ವನಿಯ ಮೇಲೆ ಕಣ್ಣಿಡುವ ಅಧಿಕಾರ ಇರಬೇಕು ಎಂಬ ಪ್ರಸ್ತಾವವನ್ನು ಹಜಾರೆ ಬಳಗ ಮುಂದಿಟ್ಟಿದೆ. ಆದರೆ ಸರ್ಕಾರಿ ಕರಡು ಈ ಬಗ್ಗೆ ಪ್ರಸ್ತಾಪ ಕೂಡಾ ಮಾಡಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.