ನವದೆಹಲಿ (ಪಿಟಿಐ): ಕಳೆದ ವಾರವಷ್ಟೇ ಹತ್ತಿ ರಫ್ತನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಸೋಮವಾರ ಈ ನಿಷೇಧವನ್ನು ವಾಪಸು ಪಡೆದಿದೆ.
`ಮಾರ್ಚ್ 5ರಂದು ಹತ್ತಿ ರಫ್ತು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ~ ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
ಆದರೆ, ರಫ್ತಿಗೆ ಅಗತ್ಯವಾದ ನೋಂದಣಿ ಪ್ರಮಾಣ ಪತ್ರ (ಆರ್.ಸಿ) ಹೊಸದಾಗಿ ಮಂಜೂರು ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಮಾತ್ರವಲ್ಲದೆ, ಈಗಾಗಲೇ ಮಂಜೂರು ಆಗಿರುವ ಆರ್.ಸಿ ಯನ್ನು ಮತ್ತೆ ಊರ್ಜಿತಗೊಳಿಸಿಕೊಂಡ ನಂತರವಷ್ಟೆ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಡಿಜಿಎಫ್‌ಟಿ ಹೇಳಿದೆ.
ಹತ್ತಿ ರಫ್ತು ನಿಷೇಧಕ್ಕೆ ಅನೇಕ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕೃಷಿ ಸಚಿವ ಶರದ್ ಪವಾರ್ ಕೂಡ ಈ ಬಗ್ಗೆ ಅಸಮಾಧಾನಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.