ADVERTISEMENT

ಹತ್ಯೆ ಆರೋಪಿಗಳು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕೊಲ್ಲಂ (ಪಿಟಿಐ): ಕೇರಳ ಕಡಲ ತೀರದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಇಟಲಿ ನೌಕಾ ಪಡೆಯು ಇಬ್ಬರು ಸಿಬ್ಬಂದಿಯನ್ನು ಕರುನಾಗಪಳ್ಳಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 3 ದಿನಗಳ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.

ನ್ಯಾಯಾಧೀಶ ಕೆ.ಪಿ. ಜಾಯ್ ಅವರ ಮುಂದೆ ಆರೋಪಿಗಳನ್ನು ಸೋಮವಾರ ಹಾಜರು ಪಡಿಸ      ಲಾಯಿತು.
ನ್ಯಾಯಾಧೀಶರು ಮಾರ್ಚ್ 5ರವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲು          ಸಮ್ಮತಿಸಿದರು.

ಮಹಾಶಿವರಾತ್ರಿ ನಿಮಿತ್ತ ಕೋರ್ಟ್‌ಗೆ ರಜೆ ಇದ್ದ ಕಾರಣ ಆರೋಪಿಗಳಾದ ಲ್ಯಾಟೊರ್ ಮ್ಯಾಸಿಮಿಲಿಯಾನೊ ಮತ್ತು ಸಲ್ವಟೋರ್ ಗಿರೊನೆ ಅವರನ್ನು ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಯಿತು. ಇವರಿಬ್ಬರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.