ADVERTISEMENT

ಹರಿಯಾಣದಲ್ಲಿ ಮದ್ಯ ಮಾರಾಟಕ್ಕೆ 'ಆಧಾರ್' ಕಡ್ಡಾಯ

ಪಿಟಿಐ
Published 6 ಮಾರ್ಚ್ 2018, 7:46 IST
Last Updated 6 ಮಾರ್ಚ್ 2018, 7:46 IST
ಮದ್ಯದಂಗಡಿ
ಮದ್ಯದಂಗಡಿ   

ಚಂಡೀಗಢ: ಹರಿಯಾಣದಲ್ಲಿ ಮದ್ಯ ಮಾರಾಟಕ್ಕೆ ಆಧಾರ್ ಕಡ್ಡಾಯ ಮಾಡಲು ಸರ್ಕಾರ ತೀರ್ಮಾನಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟ ಮಾಡುವ ರಿಟೇಲ್ ಅಂಗಡಿಗಳಲ್ಲಿ ಆಧಾರ್ ಮತ್ತು ಬಿಲ್ ಕಡ್ಡಾಯ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್  ಸರ್ಕಾರ ಆದೇಶಿಸಿದೆ. ಅದೇ ವೇಳೆ ಪಂಚಾಯತ್‍ಗಳ ಮನವಿ ಮೇರೆಗೆ 200 ಗ್ರಾಮಗಳಲ್ಲಿ ಮದ್ಯ ನಿಷೇಧ ಮಾಡಲಾಗಿದೆ.

ಸೋಮವಾರ ಮಂಡಿಸಲಾದ ರಾಜ್ಯ ಮದ್ಯ ನೀತಿಯಲ್ಲಿ ಈ ಹೊಸ ನಿರ್ಣಯ ತೆಗೆದುಕೊಳ್ಳಲಾಗಿದೆ. ದೇಸಿ ಮದ್ಯದ ಅಬಕಾರಿ ಸುಂಕದಲ್ಲಿ ಶೇ. 57 ಮತ್ತು  ಭಾರತೀಯ ಕಂಪನಿಗಳು ತಯಾರಿಸಿದ ವಿದೇಶಿ ಮದ್ಯಕ್ಕೆ ಅಬಕಾರಿ ಸುಂಕ ಶೇ. 10ರಷ್ಟು ಹೆಚ್ಚಿಸಲಾಗಿದೆ. ಹಾಗಾಗಿ ಇಲ್ಲಿ ಮದ್ಯ ಬೆಲೆ ಏರಿಕೆಯಾಗಲಿದೆ.
ಪರಿಸರ ಕಾಳಜಿಗಾಗಿ ದೇಸಿ ಮದ್ಯದ ಬಾಟಲಿ ಗಾಜಿನಿಂದ ತಯಾರಿಸಬೇಕು ಎಂದು ಈ ನೀತಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT