ADVERTISEMENT

ಹಳಿತಪ್ಪಿದ ಮುಂಬೈ–ಹೌರಾ ಮೇಲ್‌: 12 ರೈಲುಗಳ ಸಂಚಾರ ರದ್ದು

ಏಜೆನ್ಸೀಸ್
Published 10 ಜೂನ್ 2018, 5:37 IST
Last Updated 10 ಜೂನ್ 2018, 5:37 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಮುಂಬೈ: ಮಹಾರಾಷ್ಟ್ರದ ಇಘಾತ್ಪುರಿ ರೈಲು ನಿಲ್ದಾಣದ ಬಳಿ ಮುಂಬೈ– ಹೌರಾ ಮೇಲ್‌ ರೈಲು ಭಾನುವಾರ ಬೆಳಗಿನಜಾವ ಹಳಿ ತಪ್ಪಿದೆ.

ನಾಗ್ಪುರದ ಮೂಲಕ ಚಲಿಸುವ ಈ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಘಟನೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಒಂದು ರೈಲನ್ನು ಬೇರೊಂದು ಮಾರ್ಗದ ಮೂಲಕ ಕಳುಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.