ನವದೆಹಲಿ: ನೈರುತ್ಯ ಮುಂಗಾರು ಮುನ್ಸೂಚನೆ ನೀಡುವಲ್ಲಿ ಎಡವಿದ್ದನ್ನು ಭಾರತೀಯ ಹವಾಮಾನ ಇಲಾಖೆ ಇದೇ ಮೊದಲ ಬಾರಿ ಒಪ್ಪಿಕೊಂಡಿದೆ.
2011ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆಯು ನಿಖರವಾಗಿರಲಿಲ್ಲ ಎಂದು ಮುಂಗಾರು ಅವಧಿ ಅಂತ್ಯದ ವರದಿಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.
`ಇಲಾಖೆ ಸುಧಾರಣೆಗಾಗಿ ಸಲಹೆ ಸ್ವೀಕರಿಸಲು ಸಿದ್ಧವಿದೆ~ ಎಂದು ನಿರ್ದೇಶಕ ಅಜಿತ್ ತ್ಯಾಗಿ ತಿಳಿಸಿದ್ದಾರೆ. ಏಪ್ರಿಲ್‌ನಿಂದ ನೀಡಿದ 4 ಮುನ್ಸೂಚನೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿವೆು ಮಳೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಬಿದ್ದ ಮಳೆಯ ಪ್ರಮಾಣ ಇದಕ್ಕಿಂತ ಅಧಿಕ. ಮುಂಗಾರಿನ ದ್ವಿತೀಯಾರ್ಧದ ಮಳೆ ಪ್ರಮಾಣ ನಿಖರವಾಗಿ ಹೇಳಲು ಈ ನಾಲ್ಕೂ ಮುನ್ಸೂಚನೆಗಳು ವಿಫಲವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.