ADVERTISEMENT

ಹಸನ್ ಅಲಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 18:30 IST
Last Updated 11 ಮಾರ್ಚ್ 2011, 18:30 IST
ಹಸನ್ ಅಲಿಗೆ ಜಾಮೀನು
ಹಸನ್ ಅಲಿಗೆ ಜಾಮೀನು   

ಮುಂಬೈ (ಪಿಟಿಐ): ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ವಿಚಾರಣೆಗಾಗಿ ಆತನ ಬಂಧನ ಅವಧಿಯನ್ನು ವಿಸ್ತರಿಸಬೇಕು ಎಂಬ ಜಾರಿ ನಿರ್ದೇಶನಾಲಯದ (ಇ.ಡಿ.) ಮನವಿಯನ್ನು ತಿರಸ್ಕರಿಸಿರುವ ಸ್ಥಳೀಯ ನ್ಯಾಯಾಲಯ, ಅಲಿಗೆ ಜಾಮೀನು ನೀಡಿದೆ. ಈ ಮೂಲಕ ಇ.ಡಿ. ಮುಖಭಂಗಕ್ಕೆ ಒಳಗಾಗಿದೆ.‘ಹಸನ್ ಅಲಿ ಖಾನ್ ತಪ್ಪು ಎಸಗಿದ್ದಾನೆ ಎಂಬುದನ್ನು ತೋರಿಸುವ ಯಾವೊಂದು ಸಾಕ್ಷ್ಯವನ್ನೂ ಇ.ಡಿ. ಒದಗಿಸಿಲ್ಲ ಎಂದು ಮುಖ್ಯ ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ತೆಹಲಿಯಾನಿ ಹೇಳಿ, ಬಂಧನ ಅವಧಿ ವಿಸ್ತರಣೆ ಕೋರಿದ ಅದರ ಅರ್ಜಿಯನ್ನು ತಿರಸ್ಕರಿಸಿದರು.

ಆದರೆ ನ್ಯಾಯಾಧೀಶರು ಇದೇ ಸಮಯದಲ್ಲಿ ಅಲಿಗೆ ಕೆಲವು ಷರತ್ತುಗಳನ್ನೂ ವಿಧಿಸಿದರು. ಅಲಿ ಐದು ದಿನಗಳ ತನಕ ದೇಶ ಬಿಟ್ಟು ಹೋಗಬಾರದು, ಪ್ರತಿ ದಿನ ಇ.ಡಿ. ಅಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದರು.ಜಾರಿ ನಿರ್ದೇಶನಾಲಯವು ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಇ.ಡಿ ಪರ ವಕೀಲ ರಾಜೀವ್ ಅವಸ್ಥಿ ತಿಳಿಸಿದರು.

‘ಲೇವಾದೇವಿ ವ್ಯವಹಾರಲ್ಲಿ ಅಲಿ ಭಾಗಿಯಾಗಿದ್ದನ್ನು ಪುಷ್ಟೀಕರಿಸುವ ಸಾಕ್ಷ್ಯಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ನ್ಯಾಯಾಲಯ ಇದನ್ನು ಪುರಸ್ಕರಿಸಿಲ್ಲ ಅಷ್ಟೇ. ತನಿಖೆಯಲ್ಲಿನ ಕೆಲವು ಅಂತರಗಳನ್ನು ಸರಿಪಡಿಸುವುದಕ್ಕಾಗಿ ಈ ಹಂತದಲ್ಲಿ ಅಲಿ ಬಂಧನದಲ್ಲಿ ಇರುವ ಅಗತ್ಯ ಹೆಚ್ಚಿದೆ’ ಎಂದು ಅವರು ಹೇಳಿದರು.ಆದರೆ ನ್ಯಾಯಾಧೀಶರು ಇದೇ ಸಮಯದಲ್ಲಿ ಅಲಿಗೆ ಕೆಲವು ಷರತ್ತುಗಳನ್ನೂ ವಿಧಿಸಿದರು. ಅಲಿ ಐದು ದಿನಗಳ ತನಕ ದೇಶ ಬಿಟ್ಟು ಹೋಗಬಾರದು, ಪ್ರತಿ ದಿನ ಇ.ಡಿ. ಅಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದರು.

ಜಾರಿ ನಿರ್ದೇಶನಾಲಯವು ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಇ.ಡಿ ಪರ ವಕೀಲ ರಾಜೀವ್ ಅವಸ್ಥಿ ತಿಳಿಸಿದರು.‘ಲೇವಾದೇವಿ ವ್ಯವಹಾರಲ್ಲಿ ಅಲಿ ಭಾಗಿಯಾಗಿದ್ದನ್ನು ಪುಷ್ಟೀಕರಿಸುವ ಸಾಕ್ಷ್ಯಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ನ್ಯಾಯಾಲಯ ಇದನ್ನು ಪುರಸ್ಕರಿಸಿಲ್ಲ ಅಷ್ಟೇ. ತನಿಖೆಯಲ್ಲಿನ ಕೆಲವು ಅಂತರಗಳನ್ನು ಸರಿಪಡಿಸುವುದಕ್ಕಾಗಿ ಈ ಹಂತದಲ್ಲಿ ಅಲಿ ಬಂಧನದಲ್ಲಿ ಇರುವ ಅಗತ್ಯ ಹೆಚ್ಚಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.