ಅಗರ್ತಲ (ಐಎಎನ್‌ಎಸ್): ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಏಳು ವರ್ಷದ ಬಾಲಕಿ ಸಜೀವವಾಗಿ ದಹನವಾದ ಘಟನೆ ತ್ರಿಪುರಾದಲ್ಲಿ ಭಾನುವಾರ ನಡೆದಿದೆ.
ಶಾರ್ಟ್ ಸರ್ಕಿಟ್-ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಹತ್ತು ವಿದ್ಯಾರ್ಥಿನಿಯರಿಗೆ ಸುಟ್ಟಗಾಯಗಳಾಗಿವೆ. ಈ ಹಾಸ್ಟೆಲ್‌ನಲ್ಲಿ 73 ವಿದ್ಯಾರ್ಥಿನಿಯರು ಇದ್ದು, ಆಗ್ನಿ ಆಕಸ್ಮಿಕ ಸಂಭವಿಸುತ್ತಿದ್ದಂತೆಯೇ ಎಲ್ಲರೂ ಹೊರಗೆ ಬರುವಲ್ಲಿ ಯಶಸ್ವಿಯಾದರು. ಆದರೆ ಬಾಲಕಿ ಮಾತ್ರ ಹಾಸ್ಟೆಲ್ ಒಳಗೆ ಸಿಲುಕಿ ಸಜೀವವಾಗಿ ದಹನವಾದಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.