ADVERTISEMENT

ಹೆಚ್ಚುವರಿ ಧಾನ್ಯ ಬಡವರಿಗೆ ವಿತರಿಸಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ನವದೆಹಲಿ (ಐಎಎನ್‌ಎಸ್): ಸರ್ಕಾರದ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಆಹಾರ ಧಾನ್ಯಗಳನ್ನು ಪಡಿತರ ವಿತರಣೆ ಮೂಲಕ ಸಬ್ಸಿಡಿ ದರದಲ್ಲಿ ಬಡವರಿಗೆ ಹಂಚಬೇಕೆಂದು ಸಿಪಿಎಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಎಂ, `ಸರ್ಕಾರದ ಗೋದಾಮುಗಳಲ್ಲಿ 7.11 ಕೋಟಿ ಟನ್ ಆಹಾರ ಧಾನ್ಯ ಸಂಗ್ರಹವಾಗಿದೆ. ಸಾಮಾನ್ಯವಾಗಿ ನಿಗದಿಪಡಿಸುವ ಕಾಪು ದಾಸ್ತಾನಿಗಿಂತ 5 ಕೋಟಿ ಟನ್ ಹೆಚ್ಚುವರಿ ಆಹಾರ ಧಾನ್ಯವನ್ನು ಗೋದಾಮುಗಳಲ್ಲಿ ಸಂಗ್ರಹವಾಗಿದೆ. ಧಾನ್ಯಗಳ ಪ್ರಮಾಣ ಹೆಚ್ಚಾದಂತೆ ಸಂಗ್ರಹಕ್ಕಾಗಿ ಜಾಗದ ಕೊರತೆಯೂ ಎದುರಾಗುತ್ತದೆ~ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.